ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೇಣೂರು ಸರಕಾರಿ ಪ್ರೌಢಶಾಲೆಯ ಸುಪ್ರಿಯಾ ಮತ್ತು ಶ್ರೇಯಸ್ ಭಟ್
ವೇಣೂರು : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಇದರ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ಸರ್ಕಾರಿ ಪ್ರೌಢಶಾಲೆ ವೇಣೂರು ಇಲ್ಲಿಯ ವಿದ್ಯಾರ್ಥಿಗಳಾದ ಸುಪ್ರಿಯ ಮತ್ತು ಶ್ರೇಯಸ್ ಭಟ್ ತೃತೀಯ ಸ್ಥಾನವನ್ನು ಪಡೆದು ರೂ. 10,000 ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಪಡೆದು ನಮ್ಮ ಶಾಲೆಗೆ ,ತಾಲೂಕಿಗೆ, ಜಿಲ್ಲೆಗೆ ಹೆಮ್ಮೆಯನ್ನು ತಂದಿರುತ್ತಾರೆ.
ಕೇವಲ ಮೂರು ದಿನಗಳ ತಯಾರಿಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದ ಹೆಮ್ಮೆಯ ವಿದ್ಯಾರ್ಥಿಗಳಿಗೆ ಶಾಲೆಯ ಉಪಪ್ರಾಂಶಪಾಲರು, ಶಿಕ್ಷಕ ವರ್ಗ, ಎಸ್ ಡಿ ಎಂ ಸಿ ಮತ್ತು ಸಮಸ್ತ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.