ಬಾರ್ ಮುಂದೆ ಬೇಕಂತೆ ಆಸ್ಪತ್ರೆ, ವಿಶ್ರಾಂತಿ ಭವನ: ಒಂದೆರಡಲ್ಲ ಮದ್ಯ ಪ್ರಿಯರ ಡಿಮ್ಯಾಂಡು!
ಬೆಳಗಾವಿ, ಡಿಸೆಂಬರ್ 14: ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ.ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಚಿತ್ರ ವಿಭಿನ್ನ ಹೋರಾಟ ನಡೆಯುತ್ತಿದೆ. ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ನಡೆಸಿದ್ದು, ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ.
ಈ ಮದ್ಯಪಾನ ಪ್ರಿಯರ ಬೇಡಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ಮದ್ಯಪಾನ ಪ್ರಿಯರ ಬೇಡಿಕೆ ಕೇಳಿ ಸಚಿವ ಸಂತೋಷ ಲಾಡ್ ಸುಸ್ತೋಸುತ್ತು ಆಗಿದ್ದಾರೆ.
ಇನ್ನೂ ಮದ್ಯಪಾನ ಪ್ರಿಯರ ವಿಚಿತ್ರ ಹೋರಾಟ ಕಂಡು ಶಾಕ್ ಆಗಿದ್ದಾರೆ. ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದ ಲಾಡ್ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಡಿಸೆಂಬರ್ 31 ರಂದು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಣೆ ಮಾಡಬೇಕು.ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು, ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು.
ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ ಹತ್ತರಷ್ಟು ಅನುದಾನ ನೀಡಬೇಕು. ಪ್ರತಿ ಬಾಟಲ್ ಗೆ ಇನ್ಸ್ಯೂರೆನ್ಸ್ ಮಾಡಬೇಕು ಪ್ರತಿ ಬಾರ್ ಮುಂದೆ ಆಂಬುಲೆನ್ಸ್ ಸೇವೆ ನೀಡಬೇಕು, ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಬೇಕೆಂದ ಮದ್ಯಪಾನ ಪ್ರಿಯರು ಆಗ್ರಹಿಸಿದ್ದಾರೆ.