ಕರ್ನಾಟಕ ಸದನದೊಳಗೆ ನುಗಿದ್ದ ನಾಲ್ವರ ಪೈಕಿ ಮನೋರಂಜನ್ ಮೈಸೂರಿನವನು. ಈತನ ಹಿನ್ನೆಲೆ ಏನು?
ಮೈಸೂರು, ಡಿಸೆಂಬರ್ 13: ಸಂಸತ್ ಭವನದಲ್ಲಿ ಕಲಾಪ ನಡೆಯುವಾಗ ಸದನದೊಳಗೆ ನುಗಿದ್ದ ನಾಲ್ವರ ಪೈಕಿ ಮನೋರಂಜನ್ ಮೈಸೂರಿನವನಾಗಿದ್ದು, ಎಂಜಿನಿಯರ್ ಪದವೀಧರನಾಗಿದ್ದನು ಎಂಬ ಅಂಶ ತನಿಖೆಯಿಂದ ತಿಳಿದು ಬಂದಿದೆ.
ಇಂದು ಮಧ್ಯಾಹ್ನ ಲೋಕಸಭೆ ಸದನದೊಳಗೆ ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿ ದಾಂದಲೆ ಎಬ್ಬಿಸಿದ್ದರು. ಅಲ್ಲದೆ, ಗ್ಯಾಸ್ ಸ್ಪ್ರೇಯನ್ನು ಹರಡಿದ್ದರು. ಇದೀಗ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತರಲ್ಲಿ ಮನೋರಂಜನ್ ಒಬ್ಬನಾಗಿದ್ದು, ಈತ ಮೈಸೂರಿನವನು. ಟಿವಿಯಲ್ಲಿ ಮಗನ ಚಿತ್ರ ನೋಡಿ ಅವರ ತಂದೆ ದೇವೇರಾಜೇ ಗೌಡ ” ಈತ ನನ್ನ ಮಗನೆ” ಎಂದು ದೃಢಪಡಿಸಿದ್ದಾನೆ.
ಎಂಜಿನಿಯರಿಂಗ್ ಓದಿದ್ದ:
“ಮನೋರಂಜನ್ ನನ್ನ ಮಗ. ಕ್ರಾಂತಿಕಾರಿಕ ಪುಸ್ತಕಗಳನ್ನು ಓದುತ್ತಿದ್ದ. ತುಂಬಾ ಬುದ್ಧಿವಂತ. ಬೆಂಗಳೂರಿನಲ್ಲಿ ಬಿಇ ವ್ಯಾಸಂಗವನ್ನು 2014 ರಲ್ಲಿ ಪೂರೈಸಿದ್ದನು. ಸೆಂಟ್ ಜೋಸೆಫ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ. ನಾನು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವನು. ಮಗನ ವ್ಯಾಸಂಗಕ್ಕಾಗಿ 15 ವರ್ಷಗಳ ಹಿಂದೆ ಮೈಸೂರಿಗೆ ಬಂದೆ. ವಿಜಯ ನಗರ ಎರಡನೇ ಹಂತದಲ್ಲಿ ವಾಸ ಇದ್ದೇವೆ. ಮನೋರಂಜನ್ ನನ್ನ ಏಕೈಕ ಮಗ” ಎಂದು ಮಾಹಿತಿ ನೀಡಿದ್ದಾರೆ.
ಪ್ರತಾಪಸಿಂಹ ಅವರಿಂದ ಪಾಸ್ ಪಡೆದಿದ್ದ:
ಮನೋರಂಜನ್ ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಕಚೇರಿಯಿಂದ ಮೂರು ಪಾಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ ಮೂಲಕ ಸದನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತುಕೊಳ್ಳುವ ಅವಕಾಶ ಪಡೆದುಕೊಂಡಿದ್ದನು.
ಮನೋರಂಜನ್ ಮನೆಯಲ್ಲಿ ಶೋಧ:
ಈ ನಡುವೆ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಮನೋರಂಜನ್ ಮನೆಗೆ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ತಂದೆ ದೇವರಾಜೇಗೌಡ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಮನೆಯಲ್ಲಿ ಏನಾದರೂ ವಸ್ತುಗಳು ಇದೆಯೇ ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚೇಗೆವೆರಾ ಸೇರಿದಂತೆ ಹಲವು ಪುಸ್ತಕ ಲಭಿಸಿದೆ.
ಬೆಂಗಳೂರಿಗೆ ಹೋಗುವೆ ಎಂದಿದ್ದ!
ಮಗ ಕಳೆದ ಮೂರು ದಿನದ ಹಿಂದೆ ಮನೆಗೆ ಬಂದಿದ್ದ. ಬೆಂಗಳೂರಿಗೆ ಹೋಗುವೆ ಎಂದು ಹೇಳಿ ಹೋಗಿದ್ದ. ಈ ಬಗ್ಗೆ ಬೇರೆ ಮಾಹಿತಿ ನಮಗೆ ಗೊತ್ತಿಲ್ಲ. ಕೆಲಸ ಇಲ್ಲದೆ ನಿರುದ್ಯೋಗಿ ಆಗಿದ್ದ. ಅವನಿಗೆ ಯಾವುದೆ ಸಂಘಟನೆಯಾಗಲಿ, ರಾಜಕೀಯ ಪಕ್ಷದವರೊಂದಿಗಾಗಲಿ ಸಂಪರ್ಕ ಇರಲಿಲ್ಲ. ತೋಟ ಕೆಲಸ ಮಾಡಿಕೊಂಡಿದ್ದ. ಸದನದಲ್ಲಿ ನುಗ್ಗಿ ಬಂಧಿತರಾಗಿರುವ ಆತನ ಸಹಚರರ ಪರಿಚಯ ನನಗೆ ಇಲ್ಲ ಎಂದು ತಂದೆ ದೇವರಾಜೇಗೌಡ ತಿಳಿಸಿದ್ದಾರೆ.
ಪ್ರತಾಪಸಿಂಹ ಅವರಿಂದ ಪಾಸ್ ಪಡೆದಿದ್ದ:
ಮನೋರಂಜನ್ ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಕಚೇರಿಯಿಂದ ಮೂರು ಪಾಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ ಮೂಲಕ ಸದನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತುಕೊಳ್ಳುವ ಅವಕಾಶ ಪಡೆದುಕೊಂಡಿದ್ದನು..
ಮನೋರಂಜನ್ ನಿವಾಸಕ್ಕೆ ಎಸಿಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಕೂಡ ಈ ವೇಳೆ ಇದ್ದರು. ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಮನೋರಂಜನ್ ನಿವಾಸವಿದೆ.
ಮನೋರಂಜನ್ ಕುರಿತು:
ಮೈಸೂರಿನ ವಿಜಯನಗರ ನಿವಾಸಿ ಮನೋರಂಜನ್. ಅನುಕೂಲಸ್ಥ ಕುಟುಂಬದ ಹಿನ್ನೆಲೆ ಹೊಂದಿದ್ದವನು. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿಇ ವ್ಯಾಸಂಗ ಮಾಡಿದ್ದನು. ಅವನಿಗೆ ಬುಕ್ ಓದುವ ಹವ್ಯಾಸ ಇಟ್ಟುಕೊಂಡಿದ್ದನು. ಕಳೆದ 4 ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಇದೆ ಎಂದು ಹೊರಟಿದ್ದನು. ಅವನಿಗೆ 34 ವರ್ಷವಾಗಿತ್ತು. ಸಂತ ಜೋಸೆಫ್ ಶಾಲೆಯಲ್ಲಿ ಓದಿದ್ದನು. ಮರಿಮಲ್ಲಪ್ಪ ಕಾಲೇಜಿನಲ್ಲಿ ಓದಿದ್ದನು. ನಂತರ ಬೆಂಗಳೂರ್ ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದನು.