ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ! ಮಾಹಿತಿ ಇದ್ದರೂ ಕ್ಯಾರೇ ಅನ್ನದ ಸ್ಥಳೀಯ ಜನಪ್ರತಿನಿಧಿಗಳು?
ಶಿರ್ಲಾಲು; ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕ. ಕರಂಬಾರು ಶಾಲಾ ಪ್ರದೇಶಗಳಲ್ಲಿ ಮಕ್ಕಳು, ವೃದ್ಧರು ಜನ ಸಾಮಾನ್ಯರು ಸಂಚರಿಸುವಾಗ ಆತಂಕ ಪಡುವ ದಿನ ಬಂದಿದೆ. ಇದಕ್ಕೆ ಕಾರಣ ಈ ಭಾಗದಲ್ಲಿ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ.
ಬೀದಿ ನಾಯಿಗಳ ಕಾಟದ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ಜನರ ಪರವಾಗಿ ಆಡಳಿತದ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಆಗಿರುವ ಬಗ್ಗೆ ಮಾಹಿತಿ ಇರುವುದಿಲ್ಲ ಅನ್ನುವ ಆರೋಪ ಕೇಳಿ ಬಂದಿದೆ.
ಬಂತಡ್ಕ ಹಾಗೂ ಕರಂಬಾರು ಶಾಲಾ ವಠಾರಗಳಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳು ಜಾಸ್ತಿಯಾಗುತ್ತಿದೆ. ಇದಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮುಂದೆ ಬೀದಿ ನಾಯಿಗಳಿಂದ ಆಗುವ ಎಲ್ಲಾ ದುರಂತಗಳಿಗೆ ಸ್ಥಳೀಯ ಗ್ರಾಮ ಪಂಚಾಯತಿ ಹೊಣೆ ಎಂದು ಕರಂಬಾರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ತಿಳಿಸಿದ್ದಾರೆ.
ಶಾಲೆಯ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಹಲವು ಬಾರಿ ಗ್ರಾಮ ಪಂಚಾಯಿತಿಗೆ ಗಮನಕ್ಕೆ ತಿಳಿಸಿದ್ದೇವೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ರೀತಿಯ ಕ್ರಮ ಕೈಗೊಳ್ಳಲಿ ಎಂದು ಬಂತಡ್ಕ ನಿವಾಸಿ ಸಿದ್ದೀಕ್ ಬಂತಡ್ಕ ಆಗ್ರಹಿಸಿದ್ದಾರೆ.