ಅಳದಂಗಡಿ ಅರಮನೆಗೆ ಆನೆ ಮೆರುಗು! ಚಾವಡಿ ಮುಖದ್ವಾರಕ್ಕೆ ಶೀಲಾಮಯ ಆನೆಗಳ ಕೊಡುಗೆ
ಅಳದಂಗಡಿ: ತುಳುನಾಡಿನ ಅಜಿಲ ಸೀಮೆಯ ಪರಂಪರೆಯನ್ನು ಉಳಿಸಿರುವ ಅಳದಂಗಡಿ ಅರಮನೆಗೆ ಮತ್ತಷ್ಟು ಮೆರುಗು ಬಂದಿದೆ!
ಹೌದು, ಇತಿಹಾಸ ಪ್ರಸಿದ್ಧ ಅಳದಂಗಡಿಯಲ್ಲಿರುವ ಅಜಿಲ ವಂಶಸ್ಥರ ಅರಮನೆಯ ಮುಖದ್ವಾರಕ್ಕೆ ದಾನಿಯೊಬ್ಬರು ಎರಡು ಶೀಲಾಮಯ ಆನೆಗಳನ್ನು ಕೊಡುಗೆಯಾಗಿ ಸಮರ್ಪಸಿದ್ದಾರೆ.
ಬೆಂಗಳೂರಿನ ಉದ್ಯಮಿ ಧಾರ್ಮಿಕ ಪರಿಷತ್ ಸದಸ್ಯರಾಗಿರುವ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ರೂ. 2 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ್ದಾರೆ.
ಆನೆ ಸುಮಾರು ಮುರೂವರೆ ಅಡಿ ಎತ್ತರವಿದ್ದು, 20 ಇಂಚು ಅಗಲ, 38 ಇಂಚು ಉದ್ದವಿದೆ. ಇದರ ಕೆತ್ತನೆ ಕೆಲಸವನ್ನು ವಿಟ್ಲದ ಶಿಲ್ಪಿ ದಿನೇಶ್ ಅವರು ರಚಿಸಿದ್ದು, ಸುಮಾರು 2 ಲಕ್ಷ ವೆಚ್ಚ ತಗಲುತ್ತದೆ ಎಂದು ಮಾಹಿತಿ ತಿಳಿಸಿದರು.
ಅರಮನೆ ವತಿಯಿಂದ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ದಾನಿ ದೇವೇಂದ್ರ ಹೆಗ್ಡೆ ಹಾಗೂ ಶಿಲ್ಪಿ ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಶಿವಪ್ರಸಾದ್ ಅಜಿಲ, ನಿವೃತ್ತ ಸೇನಾನಿ ಕ್ಯಾl ಬ್ರಿಜೇಶ್ ಚೌಟ, ಡಾ. ಪ್ರತೀತ್ ಪಿm ಅಜಿಲ, ಡಾ. ಪ್ರೌಷ್ಟಿಲ್ ಪಿ. ಅಜಿಲ, ಜಗದೀಶ್ ಹೆಗ್ಡೆ ನಾವರಗುತ್ತು, ಚಾವಡಿ ನಾಯಕ ರಾಜಶೇಖರ್ ಶೆಟ್ಟಿ, ಸುಪ್ರೀತ್ ಜೈನ್ ಅಳದಂಗಡಿ ಮತ್ತಿತರರು ಇದ್ದರು.