December 23, 2024

ಹೊಸಪಟ್ಣ ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ ಪದಗ್ರಹಣ: ಗ್ರಾಮೀಣ ಜನತೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗುವಲ್ಲಿ ಯೋಜನೆಯ ಕೊಡುಗೆ ಅಪಾರ: ಪ್ರವೀಣ್ ಪೂಜಾರಿ ಜಾರಿಗೆದಡಿ

0

ವೇಣೂರು, ಅ. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯದ ಹೊಸಪಟ್ಣ ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ ಪದಗ್ರಹಣ ಸಮಾರಂಭವು ಹೊಸಪಟ್ಣದ ಶ್ರೀ ಸತ್ಯನಾರಾಯಣ ಮಂದಿರದ ರಂಗಮಂದಿರದಲ್ಲಿ ಜರಗಿತು.

ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷರಾಗಿರುವ ಪ್ರವೀಣ್ ಪೂಜಾರಿ ಜಾರಿಗೆದಡಿ ಅವರು ಸಮಾರಂಭವನ್ನು ಉದ್ಘಾಟಿಸಿ, ಸರಿಸುಮಾರು ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಭಾಗದ ಜನತೆ ಅದರಲ್ಲೂ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿರಲಿಲ್ಲ. ಆದರೆ ಇಂದು ಪೂಜ್ಯ ಖಾವಂದರ ಯೋಚನೆಗಳು ಯೋಜನೆಗಳಾಗಿ ಜಾರಿಗೆ ಬಂದಿದ್ದರಿಂದ ಗ್ರಾಮೀಣ ಭಾಗದ ಜನತೆ ಆರ್ಥಿಕವಾಗಿ ಸದೃಢವಾಗಿದ್ದಾರೆ. ಅಲ್ಲದೆ ಯೋಜನೆಯ ವಿವಿಧ ಕಾರ್ಯಚಟುವಟಿಕೆಗಳಿಂದ ಸಾಮಾಜಿಕವಾಗಿಯೂ ಮುಂಚೂಣಿಗೆ ಬಂದಿದ್ದಾರೆ ಎಂದರು.
ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಅವರು ಮಾತನಾಡಿ, ಯೋಜನೆಯು ಬೆಳೆದುಬಂದ ಹಾದಿ, ಒಕ್ಕೂಟದ ನಿರ್ವಹಣೆ ಬಗ್ಗೆ ಹಾಗೂ ಬ್ಯಾಂಕ್ ಮತ್ತು ಸಂಘದ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷರಾದ ವಿಜಯ ಪೂಜಾರಿ ಹೊಸಪಟ್ಣ, ಪದಾಧಿಕಾರಿಗಳು, ಗ್ರಾಮ ಸಮಿತಿಯ ಅಧ್ಯಕ್ಷರಾದ ಗೋಪಾಲ ಪೂಜಾರಿ, ಗುಂಡೂರಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ ನಿರೂಪಿಸಿ, ಸೇವಾಪ್ರತಿನಿಧಿ ಶ್ರೀಮತಿ ನಳಿನಿ ಸ್ವಾಗತಿಸಿದರು. ಆರತಿ ಒಕ್ಕೂಟದ ವರದಿಯನ್ನು ಮಂಡಿಸಿದರು. ಸುವಿಧಾ ಸಹಾಯಕರಾದ ಸುರೇಶ್ ವಂದಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು