December 24, 2024

ಹೃದಯಾಘಾತ ತಡೆಯಲು ಸಾರ್ವಜನಿಕ ಸ್ಥಳದಲ್ಲಿ AED: ಏನಿದು ಯೋಜನೆ?

0
ಬೆಂಗಳೂರು, ಆಗಸ್ಟ್ 25: ಸದ್ದಿಲ್ಲದೇ ನಗರದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಂದ ಹಿಡಿದು ಕಾಮನ್ ಮ್ಯಾನ್ ವರೆಗೂ ಕೂಡ ಹೃದಯ ಸಂಬಂಧಿ ಕಾಯಿಲೆ ಕಾಡುತ್ತಿದೆ. ಇದನ್ನು ತಪ್ಪಿಸಲು ಈಗ ಆರೋಗ್ಯ ಇಲಾಖೆ ‘ಅಪ್ಪು ಯೋಜನೆ’ ಜಾರಿಗೆ ತರಲು ಮುಂದಾಗಿದೆ.

ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆದ ಸಂದರ್ಭದಲ್ಲಿ ಮೊದಲ ಒಂದು ಗಂಟೆ ಬಹಳ ಮುಖ್ಯ ಆಗುತ್ತೆ, ಆ ಗೋಲ್ಡನ್ ಅವರ್ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋದಾಗ ವ್ಯಕ್ತಿ ಸಾಯುವ ಸಾಧ್ಯತೆ ಹೆಚ್ಚು. ಅದಕ್ಕೆ ಆ ತರಹದ ಪರಿಸ್ಥಿತಿ ಎದುರಾಗದಿರಲು ಆರೋಗ್ಯ ಇಲಾಖೆ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ AED ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿತ್ತು.

ಈಗ ಮುಂದುವರಿದು ಹಾರ್ಟ್ ಅಟ್ಯಾಕ್ ತಡೆಯಲು ಸಾರ್ವಜನಿಕ ಸ್ಥಳದಲ್ಲಿ AED ಅನುಷ್ಠಾನ ಮಾಡುವ ಬಗ್ಗೆ ಆರೋಗ್ಯ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಪ್ರತಿಯೊಂದು AEDಗೂ 70 ರಿಂದ 80 ಸಾವಿರ ವೆಚ್ಚ ಆಗಬಹುದು ಎಂದು ಅಂದಾಜು ಮಾಡಲಾಗಿದ್ದು ಇದಕ್ಕೆ ಪ್ರತ್ಯೇಕ ಟೆಂಡರ್ ಕರೆದು 2 ತಿಂಗಳಲ್ಲಿ ಆರೋಗ್ಯ ಇಲಾಖೆ ಫೈನಲ್ ಮಾಡಲಿದೆ.

ಮಾಲ್ ಗಳಲ್ಲಿ, ಅಂಗಡಿ, ಶಾಪ್, ರೈಲ್ವೆ ನಿಲ್ದಾಣಗಳಲ್ಲಿ ಸಿಬ್ಬಂದಿಗೆ AED ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಉಚಿತವಾಗಿ AED ಬಳಕೆಗೆ ಟ್ರೈನಿಂಗ್ ಕೂಡ ನೀಡಲಾಗುತ್ತದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣ ಏರಿಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆಯ ಹೊಸ ಪ್ಲ್ಯಾನಿಗೆ ಸದ್ಯ ಯಾವ್ಯಾವ ಕಡೆ AED ಅಳವಡಿಕೆ ಮಾಡಬಹುದು ಅಂತ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ.

ಜಯದೇವ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಹಬ್ ಮಾಡಿತ್ತು
 ಬಜೆಟ್ ನಲ್ಲಿ ಘೋಷಣೆ ಮಾಡಿದ ಅಪ್ಪು ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಜಯದೇವ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಹಬ್ ಮಾಡಿತ್ತು. ಜಯದೇವ ಆಸ್ಪತ್ರೆಯ ಅಡಿಯಲ್ಲಿ 45 ತಾಲೂಕು ಆಸ್ಪತ್ರೆಗಳನ್ನ ತರಲಾಗಿದೆ.

ಈ ವ್ಯಾಪ್ತಿಯ 45 ಆಸ್ಪತ್ರೆಗಳಲ್ಲಿ ಏನಾದರೂ ಹರ್ಟ್ ಆಟ್ಯಾಕ್ ತುರ್ತು ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ, ರೋಗಿಯನ್ನು ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ನೀಡಲು ತಜ್ಞ ವೈದ್ಯರು ವಿಡಿಯೋ ಕಾನ್ಪರೆನ್ಸ್ ಅಥವಾ ಆಡಿಯೋ ಮೂಲಕ ಕೇಸ್ ಆಪರೇಟ್ ಮಾಡುವ ವೈದ್ಯರ ಜೊತೆಗಿನ ಸಂವಹನದ ಮೂಲಕ ಮಾಡಲಿದೆ. ಹೃದಯಘಾತದ ಪ್ರಕರಣದ ಕೇಸ್ ಹಿಸ್ಟರಿ ತಜ್ಞ ವೈದ್ಯರ ತಂಡ ಪಡೆದು ಸ್ಥಳದಲ್ಲಿರುವ ವೈದ್ಯರು ತುರ್ತಾಗಿ ಹೇಗೆ ಚಿಕಿತ್ಸೆ ನೀಡಬೇಕು? ಯಾವ ಇಂಜೆಕ್ಸ್ ನ್ ಕೊಡಬೇಕು? ಯಾವೆಲ್ಲ ಪ್ರಾಥಮಿಕ ಚಿಕಿತ್ಸೆ ನೀಡಬೇಕು ಅಂತ ಗೈಡ್ ಮಾಡುತ್ತಾರೆ. ಈ ಆಸ್ಪತ್ರೆಗಳಿಗೆ ಕೂಡ Automated External Defibrillators (AED )ಅಳವಡಿಕೆ ಮಾಡಲಾಗುತ್ತದೆ.

ಏನಿದು ಎಇಡಿ ಯೋಜನೆ?
ಇನ್ನೂ AED ಅಂದರೆ ಏನು ಅಂತ ನೋಡುವುದಾದರೆ Automated External Defibrillators ಅಂದರೆ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಸಾಧನ. ಹೃದಯಾಘಾತದ ಸಮಯದಲ್ಲಿ AED ಸಾಧನ ಮಾರಣಾಂತಿಕ ಕಾರ್ಡಿಯಾಕ್ ಅರೆಸ್ಟ್ ತೀವ್ರತೆ ಅಳೆಯುತ್ತದೆ. ಹೃದಯಾಘಾತದ ತೀವ್ರತೆ ತಿಳದು ಸ್ವಯಂಚಾಲಿತವಾಗಿ ತುರ್ತು ಚಿಕಿತ್ಸೆ ನೀಡುತ್ತದೆ.

ಹಠಾತ್ ಕಾರ್ಡಿಯಾಕ್ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಕೆಲವು ಸಂದರ್ಭದಲ್ಲಿ AED ಹೃದಯಘಾತಕ್ಕೆ ತಕ್ಕಂತೆ ಎಲೆಕ್ಟ್ರಿಕ್ ಶಾಕ್ ಅಥವಾ ಡಿಫಿಬ್ರಿಲೇಶನ್ ನೀಡಲು ಸಾಹಯ ಮಾಡುತ್ತದೆ. ತುರ್ತು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿ ನಂತರ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವಂತಹ ಪ್ಲ್ಯಾನ್ ಇದಾಗಿದೆ. ಸುಮಾರು 3 ಕೋಟಿ ವೆಚ್ಚದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರಲ್ಲಿ ಈ ಯೋಜನೆ ಜಾರಿಗೆ ಸದ್ಯ ಆರೋಗ್ಯ ಇಲಾಖೆ ಮುಂದಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು