December 25, 2024

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಯಕ್ಷ ಶಿಕ್ಷಣ ಕಾರ್ಯಕ್ರಮ ಸಂಸ್ಕೃತಿಯನ್ನು ಉಳಿಸಲು ಯಕ್ಷಗಾನ ಪೂರಕ: ಪಟ್ಲ ಸತೀಶ್ ಶೆಟ್ಟಿ

0

 

 

 

ಹೊಸಂಗಡಿ: ಇಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ ‘ಯಕ್ಷ ಶಿಕ್ಷಣ’ ಕಾರ್ಯಕ್ರಮದ ಉದ್ಘಾಟನೆ ಆ.10ರಂದು ನೆರವೇರಿತು.

ಕಾರ್ಯಕ್ರಮವನ್ನು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಕೃತಿಯನ್ನು ಉಳಿಸಲು ಯಕ್ಷಗಾನವು ಪೂರಕ ಹಾಗೂ ಪ್ರೇರಕ ಶಕ್ತಿಯಾಗಿದೆ. ಮಕ್ಕಳ ಮೇಳಗಳನ್ನು ಸಮಾಜವು ಗುರುತಿಸುವ ಕಾರ್ಯವನ್ನು ಮಾಡಿ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಶ್ರೀ ವಾಸುದೇವ ಐತಾಳ್, ಸಂಚಾಲಕರು ಯಕ್ಷ ಶಿಕ್ಷಣದ ಸಂಚಾಲಕರು ಪ್ರಾಸ್ತಾವಿಕ ಭಾಷಣ ಮಾಡಿದರು.
ಗೌರವ ಅತಿಥಿಗಳಾಗಿ ಯುವ ಪ್ರತಿಭೆ ಅಕ್ಷಯ್ ಭಟ್ ಮತ್ತು ಜೀವಿತ್ ಪೆರಾಡಿ ಉಪಸ್ಥಿತರಿದ್ದರು.

ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶವಾಗಿದೆ ಎಂದರು.
ಶಿಕ್ಷಕಿರಾದ ಸುನಿತಾ ಸ್ವಾಗತಿಸಿದರು. ನಯನಾ ವಂದಿಸಿದರು. ವಿದ್ಯಾಲತಾ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು