ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಬೆಳ್ತಂಗಡಿ ಅಭಿಮಾನಿಗಳು, ಕಾರ್ಯಕರ್ತರಿಗೆ ಆಘಾತವಾಗಿದ್ದು ಯಾಕೆ ಗೊತ್ತಾ?
ಬೆಂಗಳೂರು/ವೇಣೂರು, ಆ. 7: ಸ್ಯಾಂಡಲ್‌ವುಡ್‌ನಲ್ಲಿ ಚಿನ್ನಾರಿ ಮುತ್ತ ಅಂತಲೇ ಪ್ರಸಿದ್ಧಿಯಾಗಿರುವ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಹೃದಯಾಘಾತದಿಂದ ನಿಧನರಾಗಿದ್ದು, ಇದರಿಂದ ಬೆಳ್ತಂಗಡಿ ತಾಲೂಕಿನ ಅಭಿಮಾನಿಗಳು ಜತೆಗೆ ಕಾಂಗ್ರೆಸ್ ಕಾರ್ಯಕರ್ತರು ಆಘಾತಗೊಂಡಿದ್ದಾರೆ.
ಹಾಗಾದರೆ ಸ್ಪಂದನಾ ನಿಧನದಿಂದ ಇಲ್ಲಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಘಾತಗೊಂಡಿದ್ದು ಹೇಗೆ, ಸ್ಪಂದನಾ ಯಾರ ಮಗಳು, ಹಿನ್ನೆಲೆ ಏನು ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ
ಹಾಗಾದರೆ ಸ್ಪಂದನಾ ನಿಧನದಿಂದ ಇಲ್ಲಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಘಾತಗೊಂಡಿದ್ದು ಹೇಗೆ, ಸ್ಪಂದನಾ ಯಾರ ಮಗಳು, ಹಿನ್ನೆಲೆ ಏನು ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ
ನಿವೃತ್ತ ಐಪಿಎಸ್ ಅಧಿಕಾರಿ ಬಿ.ಕೆ. ಶಿವರಾಮ್ ಅವರ ಪುತ್ರಿಯಾಗಿರುವ ಸ್ಪಂದನಾ ಅವರು ವಿಜಯ ರಾಘವೇಂದ್ರ ಅವರೊಂದಿಗೆ ಆಗಸ್ಟ್ ೨೬, ೨೦೦೭ರಂದು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ದಂಪತಿಗೆ ಶೌರ್ಯ ಎಂಬ ಮುಗ್ದ ಮಗನಿದ್ದಾನೆ.
ಬಿ.ಕೆ ಶಿವರಾಮ್ ಅವರ ಪುತ್ರಿಯಾದ ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಗಳಾಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ನ ಹಿರಿಯ ಮುಖಂಡ, ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಅವರು ಸ್ಪಂದನಾ ಅವರ ದೊಡ್ಡಪ್ಪ ಆಗಿದ್ದು, ಇನ್ನು ಸೋದರ ರಕ್ಷಿತ್ ಶಿವರಾಂ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೆ ವಿಧಾಸಭೆ ಚುನಾವಣೆ ವೇಳೆ ಸೋದರನ ಪರವಾಗಿ ಬೆಳ್ತಂಗಡಿ ಕ್ಷೇತ್ರದ ಪ್ರತೀ ಗ್ರಾಮಗಳಿಗೂ ತೆರಳಿ ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಅದರ ನೆನಪು ಇಲ್ಲಿಯ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮಾಸುವ ಮುನ್ನವೇ ಸ್ಪಂದನಾ ಅವರು ಇಹಲೋಕ ತ್ಯಜಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಅಪೂರ್ವ ಸಿನಿಮಾದಲ್ಲಿ ನಟನೆ
ಬಿಗ್ ಬಾಸ್ ಸ್ಪರ್ಧಿಯಾದ ವೇಳೆಯಲ್ಲಿ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಫೋಟೋವನ್ನು ಹಿಡಿದು ಮಾತನಾಡುತ್ತಲೇ ದುಃಖಿತರಾಗಿದ್ದ ದೃಶ್ಯವಂತೂ ಇನ್ನು ಕಣ್ಣಮುಂದೆ ಕಟ್ಟಿದ ಹಾಗೆ ಇದೆ. ಇವರಿಬ್ಬರ ನಡುವೆ ಎಷ್ಟಿತ್ತು ಪ್ರೀತಿ ಅಂತಾ ಇದರಲ್ಲೇ ಕಾಣಬಹುದಾಗಿದೆ. ಅಲ್ಲದೆ ಸ್ಪಂದನಾ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದು, ಬಳಿಕ ರವಿಚಂದ್ರನ್ ಜೊತೆ “ಅಪೂರ್ವ” ಸಿನಿಮಾದಲ್ಲಿಯೂ ನಟನೆಯನ್ನೂ ಮಾಡಿದ್ದಾರೆ.
ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ
ಇನ್ನು ಆಗಸ್ಟ್ 26ರಂದು ವಿಜಯ ರಾಘವೇಂದ್ರ ಮತ್ತು ಸ್ಪಂದನಾ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ಅದಕ್ಕೂ ಮುನ್ನ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ನಿಧನರಾಗಿದ್ದು, ಇದು ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾದಂತಾಗಿದೆ. ಹೀಗೆ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಿಂದ ಹೊರಬರುವ ಮುನ್ನವೇ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಉಂಟಾಗಿದೆ.
ಈ ವಿಷಯ ತಿಳಿದ ಕೂಡಲೇ ಸ್ಪಂದನಾ ಬಿ.ಕೆ ಶಿವರಾಮ್ ತಂದೆ ಮತ್ತು ವಿಜಯ ರಾಘವೇಂದ್ರ ಶ್ರೀಮುರಳಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬ್ಯಾಂಕಾಕ್‌ಗೆ ತೆರಳಿದ್ದು, ನಾಳೆ ಬ್ಯಾಂಕಾಂಕ್‌ನಿಂದ ಬೆಂಗಳೂರಿಗೆ ಸ್ಪಂದನಾ ಮೃತದೇಹವನ್ನು ತರಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.