ಇಲ್ಲಿ ಪ್ರಯಾಣಿಕರಿಗೆ ಯೆಲ್ಲೋ ಕಂಬವೇ ಆಧಾರ! ರಸ್ತೆ ಸಂಚಾರ ಅಪಾಯದಲ್ಲಿ, ಏರ್ಟೆಲ್ ತಂದ ಅವಾಂತರ!
ಹೊಸಂಗಡಿ, ಜು. 30: ರಸ್ತೆ ಬದಿಯ ಸುರಕ್ಷಿತ ಅಂತರವನ್ನು ಕಾಪಾಡದೆ ತೋಡಿನಲ್ಲೇ ಕಣಿ ನಿರ್ಮಿಸಿದ ಏರ್ಟೆಲ್ ಕಂಪೆನಿಯ ಅವಾಂತಕ್ಕೆ ಈಗ ಸಂಚಾರವೇ ಅಪಾಯದಲ್ಲಿದೆ.
ಬಡಕೋಡಿ-ಕಾಶಿಪಟ್ಣ ಸಂಪರ್ಕ ರಸ್ತೆಯ ಕೆಂಪುಗುಡ್ಡೆ ಪರಿಸರದ ಇಳಿಜಾರು ರಸ್ತೆಯಲ್ಲಿ ಈ ಅಪಾಯ ತಂದೊಡ್ಡಿದೆ. ಇಲ್ಲಿ ಪ್ರಯಾಣಿಕರಿಗೆ ಯೆಲ್ಲೋ ಕಂಬವೇ ಆಧಾರವಾಗಿದ್ದು, ಚಾಲಕರು ಚಾಲನೆಯಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲದ ನೀರು ಹೋಗುವ ಚರಂಡಿಗೆ ಕಣಿ ತೋಡಿ ಏರ್ಟೆಲ್ ಕೇಬಲ್ ಅಳವಡಿಸಿದ್ದು, ಇದರ ಮೇಲೆ ಹಾಕಿರುವ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ದೊಡ್ಡ ಗುಂಡಿಯೇ ನಿರ್ಮಾಣವಾಗಿದೆ. ರಸ್ತೆಯೇ ಕೊಚ್ಚಿ ಹೋಗುವ ಸ್ಥಿತಿಗೆ ಬಂದಿದೆ.
ಇಲ್ಲಿ ತಿರುವು ರಸ್ತೆಯಾಗಿರುವ ಕಾರಣ ಅಪಾಯದ ಮುನ್ಸೂಚನೆ ಹೆಚ್ಚಿದ್ದು, ರಾತ್ರಿ ವೇಳೆಯ ಸಂಚಾರ ಮತ್ತಷ್ಟು ಅಪಾಯ ಎಣಿಸಿದೆ. ರಸ್ತೆ ಸುರಕ್ಷತೆಯ ಕನಿಷ್ಠ ನಿಯಮವನ್ನು ಪಾಲಿಸದೆ ಕಣಿ ತೋಡಿರುವ ಏರ್ಟೆಲ್ ವಿರುದ್ಧ ರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.