ನಿರ್ವಹಣೆಗಾಗಿ ಕಾಯುತ್ತಿದೆ ನಡ್ತಿಕಲ್ಲು-ಪರಾರಿ ರಸ್ತೆ. ಕಾಂಕ್ರಿಟ್ ರಸ್ತೆಯನ್ನು ನುಂಗುತ್ತಿರುವ ಪೊದೆಗಳು!
ವೇಣೂರು, ಜು. 29: ಇಲ್ಲಿರುವ ಕಾಂಕ್ರಿಟ್ ರಸ್ತೆಯನ್ನು ಪೊದೆ ಆವರಿಸುತ್ತಿದ್ದು, ನಿರ್ವಹಣೆ ಮಾಡಿ ಅನ್ನುವಂತಿದೆ ಮೂಡುಕೋಡಿ ಗ್ರಾಮದ ನಡ್ತಿಕಲ್ಲು-ಪರಾರಿ ಸಂಪರ್ಕ ರಸ್ತೆ.
ಮೊದಲೇ ಅಗಲ ಕಿರಿದಾದ ಕಾಂಕ್ರಿಟ್ ರಸ್ತೆ ಇದಾಗಿದ್ದು, ವಾಹನಗಳು ಸಂಚರಿಸುವಾಗ ಪೊದೆ, ಮುಳ್ಳುಗಳು ತಾಗುತ್ತದೆ. ವಾಹನಗಳು ಸೈಡ್ ಕೊಡಲು ಕಷ್ಟವಾಗುತ್ತಿದೆ, ಶೀಘ್ರವಾಗಿ ವೇಣೂರು ಗ್ರಾ.ಪಂ. ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರು ಗಮನ ನೀಡುವಂತೆ ಇಲ್ಲಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.