ಸುಲ್ಕೇರಿಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚು ಲಾಭದಾಯಕ: ಸದಾನಂದ ಗೌಡ
ಸುಲ್ಕೇರಿ, ಜು. 29: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ವತಿಯಿಂದ ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯರಾಮ್ ಶೆಟ್ಟಿ ಯವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.
ನಾರಾವಿ ಸಿಎಚ್‌ಎಸ್‌ಸಿ ಕೇಂದ್ರದ ಪ್ರಭಂಧಕರಾದ ಸಚಿನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಸಿಎಚ್‌ಎಸ್‌ಸಿ ಕೇಂದ್ರದಲ್ಲಿ ಭತ್ತ ಬೆಸಾಯಕ್ಕೆ ಪೂರಕವಾಗಿ ಎಲ್ಲಾ ಆಧುನಿಕ ಯಂತ್ರಗಳು ಲಭ್ಯವಿದ್ದು, ರೈತರು ನಮ್ಮ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾವಣೆ ಮಾಡಿಸಿಕೊಂಡು ಯಂತ್ರಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ತಾಲೂಕಿನ ಜನಜಾಗ್ರತಿ ವೇದಿಕೆ ಸದಸ್ಯರಾದ ಸದಾನಂದ ಗೌಡ ರವರು ಮಾತನಾಡಿ, ಕೃಷಿಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಹೆಚ್ಚು ಲಾಭದಾಯಕ ಎಂದರು.
ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣ ಪೂಜಾರಿ, ಕೃಷಿ ಮೇಲ್ವಿಚಾರಕರಾದ ಕೃಷ್ಣ, ನಾರಾವಿ ವಿಪತ್ತು ಘಟಕದ ಸಂಯೋಜಕ ದಿನೇಶ್ ಶೆಟ್ಟಿ, ಯಂತ್ರಶ್ರೀ ಯೋಧ ಪ್ರಶಾಂತ್ ಚಿತ್ತಾರ, ನಾರಾವಿ ವಲಯ ಮೇಲ್ವಿಚಾರಕಿ ದಮಯಂತಿ, ಯಂತ್ರ ಚಾಲಕ ಬಾಲಕೃಷ್ಣ, ರೈತರು, ಊರಿನ ಗಣ್ಯರು ಉಪಸ್ಥಿತರಿದ್ದರು.