December 24, 2024

KSRTC; ಬಸ್‌ಗಳ ಬಾಡಿಗೆ ದರ ಪರಿಷ್ಕರಣೆ, ಬಸ್ ಬಾಡಿಗೆಗೆ ಪಡೆಯುವ ಮುನ್ನ ಹೊಸ ದರವನ್ನು ತಿಳಿಯಿರಿ

0

 

ಬೆಂಗಳೂರು, ಜುಲೈ 28; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್‌ಗಳ ಬಾಡಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಬಸ್‌ಗಳ ಪ್ರಯಾಣ ದರವನ್ನು ಕಿ. ಮೀ.ಗೆ 2 ರೂ. ನಿಂದ 5 ರೂ. ತನಕ ಏರಿಕೆ ಮಾಡಲಾಗಿದೆ. ಬಸ್ ಬಾಡಿಗೆಗೆ ಪಡೆಯುವ ಮುನ್ನ ಹೊಸ ದರವನ್ನು ತಿಳಿಯಿರಿ.

 

ಆಗಸ್ಟ್‌ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರವು ಜಾರಿಗೆ ಬರಲಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಆದರೆ ಈ ಹಿಂದೆಯೇ ಬಾಡಿಗೆ ಬುಕ್ ಮಾಡಿದ ಒಪ್ಪಂದಗಳಿಗೆ ಹಿಂದಿನ ದರವೇ ಇರಲಿದೆ ಎಂದು ನಿಗಮ ಸ್ಪಷ್ಟನೆಯನ್ನು ನೀಡಿದೆ.

 

ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್‌ಗಳನ್ನು ಕೆಎಸ್ಆರ್‌ಟಿಸಿ ನೀಡುತ್ತದೆ. ಈ ಬಸ್‌ಗಳ ಬಾಡಿಗೆ ದರವನ್ನು ಏರಿಕೆ ಮಾಡಲಾಗಿದೆ. ಈ ಮೊದಲು ಕನಿಷ್ಠ 300 ಕಿ. ಮೀ. ಪ್ರಯಾಣ ನಿಗದಿ ಮಾಡಲಾಗಿತ್ತು, ಈಗ ಅದನ್ನು 350ಕ್ಕೆ ಪರಿಷ್ಕರಣೆ ಮಾಡಲಾಗಿದೆ.

ವಾರದ ಎಲ್ಲಾ ದಿನ ಏಕರೂಪ ದರ; ಕೆಎಸ್ಆರ್‌ಟಿಸಿ ಈ ಹಿಂದೆ ವಾರದ ದಿನಗಳು ಮತ್ತು ವಾರಾಂತ್ಯಕ್ಕೆ ಪ್ರತ್ಯೇಕ ಬಾಡಿಗೆ ದರವನ್ನು ನಿಗದಿ ಮಾಡಿತ್ತು. ಆದರೆ ಪರಿಷ್ಕೃತ ಆದೇಶದ ಪ್ರಕಾರ ವಾರದ ಎಲ್ಲಾ ದಿನಗಳಿಗೆ ಏಕರೂಪದ ಬಾಡಿಗೆ ನಿಗದಿ ಮಾಡಲಾಗಿದೆ.

ಅಲ್ಲದೇ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ಪ್ರಯಾಣ ದರ, ಯಾವ ಬಸ್‌ಗೆ ಎಷ್ಟು? ಎಂಬ ಮಾಹಿತಿಯನ್ನು ಕೆಎಸ್ಆರ್‌ಟಿಸಿ ನೀಡಿದೆ. ಕರ್ನಾಟಕ ಸಾರಿಗೆ ಬಸ್‌ನ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಆಗಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ. ಬಾಡಿಗೆ ದರ 47 ರೂ. ಮತ್ತು ಹೊರ ರಾಜ್ಯಕ್ಕೆ 50 ರೂ. ಆಗಿದೆ.
ರಾಜಹಂಸ ಎಕ್ಸಿಕ್ಯುಟಿವ್ ಕ್ಲಾಸ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 48 ರೂ. ಮತ್ತು ಹೊರ ರಾಜ್ಯದಲ್ಲಿ 53 ರೂ. ಗಳು. ರಾಜಹಂಸ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಎಂದು ಪ್ರಕಟಣೆ ಹೇಳಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 51 ರೂ. ಮತ್ತು ಹೊರ ರಾಜ್ಯದಲ್ಲಿ 55 ರೂ. ಗಳು ಆಗಿದೆ. ರಾಜಹಂಸ (12 ಮೀ. ಚಾಸಿಸ್) ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 350 ಕಿ. ಮೀ. ಆಗಿದೆ. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 53 ರೂ. ಮತ್ತು ಹೊರ ರಾಜ್ಯದಲ್ಲಿ 57 ರೂ. ಗಳು. ಮೈಸೂರು ನಗರ ಸಾರಿಗೆ ಸೆಮಿ ಲೋ ಪ್ಲೋರ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 300 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 40 ರೂ. ಗಳು.

 

ಮಿಡಿ ಬಸ್‌ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 300 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 40 ರೂ.ಗಳಾಗಿವೆ. ನಾನ್ ಎಸಿ ಸ್ಲೀಪರ್ ಬಸ್ ಪರಿಷ್ಕೃತ ಬಾಡಿಗೆ ದಿನಕ್ಕೆ ಕನಿಷ್ಠ 400 ಕಿ. ಮೀ.. ರಾಜ್ಯದೊಳಗೆ ಪ್ರತಿ ಕಿ. ಮೀ.ಗೆ ಬಾಡಿಗೆ ದರ 55 ರೂ. ಮತ್ತು ಹೊರ ರಾಜ್ಯದಲ್ಲಿ 60 ರೂ. ಗಳು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು