ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅನುದಾನಿತ ಪ್ರೌಢಶಾಲೆ-ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ
ಬೆಳ್ತಂಗಡಿ, ಜು. 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ, ಪದವಿಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ, ಮುಂಡಾಜಿ ಪದವಿಪೂರ್ವ ವಿದ್ಯಾಲಯ ಮುಂಡಾಜೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮುಂಡಾಜೆ ಶಿಕ್ಷಣ ಸಂಸ್ಥೆಗಳು ಮುಂಡಾಜೆ,ಗ್ರಾಮ ವಿಕಾಸ ಸಮಿತಿ,ಮುಂಡಾಜೆ ವಲಯದ ಮುಂಡಾಜೆ ಕಾರ್ಯಕ್ಷೇತ್ರದ ಒಕ್ಕೂಟದ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಣ್ಣಿನ ಗಿಡಗಳ ನಾಟಿ ಮಾಡಲಾಯಿತು.
ಈ ಸಂದರ್ಭ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ಅವರು ಪರಿಸರ ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಭಟ್ ಕಜೆ ಇವರು ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿ 20 ಗಿಡಗಳ ರಕ್ಷಣೆಗೆ ಬೇಲಿ ಮಾಡಲು ಹಳೆ ವಿದ್ಯಾರ್ಥಿ ಸಂಘದ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು.
ಮುಂಡಾಜೆಯ ಕಾರ್ಗಿಲ್ ವನದ ಮುಖ್ಯಸ್ಥರಾಗದ ಸಚಿನ್ ಬಿಡೆ ಮುಂಡಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ನಾಯ್ಕ್, ಶಾಲಾ ಮುಖ್ಯೋಪಾಧ್ಯಾಯರಾದ ಜಯಂತಿ ಮತ್ತು ಚಂದ್ರಾವತಿ ಮೇಡಂ,ಗ್ರಾಮ ವಿಕಾಸ ಸಮಿತಿಯ ಪ್ರಮುಖ್ ಸುಭಾಷ್ ಚಂದ್ರ ಜೈನ್,ರಾಷ್ಟ್ರೀಯ ಸೇವಾ ಸಂಘದ ನಮಿತಾ ಕೆ ಮತ್ತು ವಿದ್ಯಾರ್ಥಿಗಳು,ವಲಯದ ಮೇಲ್ವಿಚಾರಕರಾದ ಜನಾರ್ದನ್, ಸೇವಾ-ಪ್ರತಿನಿಧಿ ಶ್ರೀಮತಿ ಲೀಲಾವತಿ, ತಾಲೂಕಿನ ಕೃಷಿ ಅಧಿಕಾರಿಯದ ರಾಮ್ ಕುಮಾರ್, ಒಕ್ಕೂಟದ ಉಪಾಧ್ಯಕ್ಷರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಹಣ್ಣಿನ ಗಿಡಗಳ ನಾಟಿ ಮಾಡಲಾಯಿತು.