ಮೂಡಬಿದಿರೆ ಶ್ರೀ ಧವಲಾ ಕಾಲೇಜು: ಮೂರು ದಿನಗಳ ಕಾಲ ನಡೆದ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ: ರೊ| ಮಹಮ್ಮದ್ ಆರೀಪ್
ಮೂಡಬಿದಿರೆ, ಜು. 22: ಇಲ್ಲಿಯ ಶ್ರೀ ಧವಲಾ ಕಾಲೇಜು ಮತ್ತು ಜೇ.ಸಿ.ಐ ಮೂಡಬಿದಿರೆ ತ್ರಿಭುವನ್ ಹಾಗೂ ಮಾನವಿಕ ಸಂಘ ಶ್ರೀ ಧವಲಾ ಕಾಲೇಜು ಮೂಡಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮವು ಜು. 15ರಂದು ಉದ್ಘಾಟನೆಗೊಂಡು ಜು. 18ರವರೆಗೆ ಕಾಲೇಜಿನ ಕಾನ್ಪರೆನ್ಸ್ ಹಾಲ್‌ನಲ್ಲಿ ನಡೆಯಿತು.
ಜೇಸಿಐ ಹಾಗೂ ರೋಟರಿ ಕ್ಲಬ್ ಮೂಡಬಿದಿರೆ ಇದರ ಪೂರ್ವ ಅಧ್ಯಕ್ಷರಾದ ಮಹಮ್ಮದ್ ಆರೀಪ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ತರಬೇತಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಅಜ್ರಿ ಎಸ್. ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಬೆಳವಣಿಗೆಯಾಗಲು ತರಬೇತಿ ಕಾರ್ಯಕ್ರಮ ಬಹಳ ಪ್ರಮುಖ. ನಮ್ಮ ಸಂಸ್ಥೆಯು ಇಂತಹ ಕಾರ್ಯಕ್ರಮಗಳಿಗೆ ಯಾವಾಗಲು ಅವಕಾಶ ಮಾಡಿಕೊಡುತ್ತದೆ ಎಂದರು. ಜೇಸಿಐ ಅಧ್ಯಕ್ಷರಾದ ಜೇಸಿ. ಸುನಿಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಜೇಸಿ ವಲಯ ತರಬೇತಿದಾರರಾದ ಚೇತನ್ ಅವರು ನಾಯಕತ್ವದ ಬಗ್ಗೆ, ಲ. ಶಿವಪ್ರಸಾದ್ ಹೆಗ್ಡೆ ಅವರು ರೋಡ್ ಬಿಹೇವಿಯರ್, ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಧನಂಜಯ ಆಚಾರ್ಯ ಅವರು ವೃತ್ತಿಪರ ದೃಷ್ಟಿಕೋನದ ಬಗೆಗೆ, ವಲಯತರಬೇತುದಾರರಾದ ವಿನಯಚಂದ್ರ ಅವರು ಭಾವಾನಾತ್ಮಕ ನಿರ್ವಹಣೆ, ಡಾ. ಪ್ರಬಾತ್ ಬಲ್ನಾಡ್, ವಲಯ ತರಬೇತಿದಾರರು, ಗುರಿ ನಿರ್ಧಾರದ ಬಗೆಗೆ ಹಾಗೂ ಮುನಿರಾಜ ರೆಂಜಾಳ ಇವರು ಶಿಷ್ಟಾಚಾರದ ಬಗೆಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಂತೋಷ್, ಮಾನವ ಹಕ್ಕುಗಳ ಸಂಘದ, ಸಂಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದರು. ಈ ವರ್ಷ ಸಂಸ್ಥೆಗೆ ಸೇರಿದ 120 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.