ಇಂದಿನಿಂದಲೇ ಎಣ್ಣೆ ಬೆಲೆಯಲ್ಲಿ ಭರ್ಜರಿ ಏರಿಕೆ!
ಬೆಂಗಳೂರು: ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತಾ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ಸಿಕ್ಕಿದೆ. ದುಬಾರಿ ದುನಿಯಾದಲ್ಲಿ ‘ಮದ್ಯ’ ಪ್ರಿಯರಿಗೆ ಆಘಾತ ಎದುರಾಗಿದ್ದು, ಇಂದು ಅಂದರೆ ಜುಲೈ 21ರಿಂದ ಎಣ್ಣೆ ರೇಟ್ ಮತ್ತಷ್ಟು ಜಾಸ್ತಿಯಾಗಲಿದೆ.
2023-24ನೇ ಸಾಲಿನ ಬಜೆಟ್ ಘೋಷಣೆ ಹಿನ್ನೆಲೆ ಮದ್ಯದ ಮೇಲಿನ ಸುಂಕ ಏರಿಕೆ ಇಂದಿನಿಂದ ಜಾರಿಗೆ ಬರಲಿದೆ. ಯಾವ ಯಾವ ಬ್ರ್ಯಾಂಡ್ ದರ ಎಷ್ಟೆಷ್ಟು ಏರಿಕೆಯಾಗುತ್ತೆ? ತಿಳಿಯೋಣ ಬನ್ನಿ.
ಹೌದು ಕೊರೊನಾ ಬಳಿಕ ರಾಜ್ಯದಲ್ಲಿ ಮದ್ಯದ ಬೆಲೆ ವಿಪರೀತ ಏರಿಕೆ ಆಗ್ತಿದೆ ಅನ್ನೋದು ಕುಡುಕರು ಅಥವಾ ಮದ್ಯ ಪ್ರಿಯರ ಆರೋಪ. ಆದರೆ ಈ ಹಿಂದಿನಿಂದ ಬಜೆಟ್ ಘೋಷಣೆ ಆಗುತ್ತಿದ್ದಂತೆ ಮದ್ಯದ ಬೆಲೆ ಏರಿಕೆ ಆಗುತ್ತಾ ಬಂದಿದೆ. ಈಗಲೂ ಅಷ್ಟೇ ಮದ್ಯದ ರೇಟ್ ಜಾಸ್ತಿ ಆಗುತ್ತಿದೆ. ಹೆಚ್ಚುವರಿಯಾಗಿ ಶೇಕಡಾ 20ರಷ್ಟು ಸುಂಕ ಹೆಚ್ಚಿಸಿರುವ ಕಾರಣ ಇನ್ನು ರಾಜ್ಯದಲ್ಲಿ ಎಣ್ಣೆ ಬೆಲೆ ಭಾರಿ ಏರಿಕೆ ಕಾಣಲಿದೆ.
ವೀಕೆಂಡ್ ಮಸ್ತಿಯಲ್ಲಿದ್ದ ಕುಡುಕರಿಗೆಲ್ಲಾ ಇದು ಶಾಕ್ ಕೊಟ್ಟಿದೆ. ಹಾಗೇ ಆವಾಗ, ಈವಾಗ ಅಂತಾ ಎಣ್ಣೆ ಹೊಡೆಯುತ್ತಿದ್ದವರೂ ಬೆಲೆ ಏರಿಕೆ ಪರಿಣಾಮ ಹಿಂದೆ-ಮುಂದೆ ಯೋಚಿಸುವಂತಾಗಿದೆ.
ಯಾವೆಲ್ಲಾ ಬ್ರ್ಯಾಂಡ್ ದರ ಏರಿಕೆ?
ಮದ್ಯ ಪ್ರಿಯರಲ್ಲಿ ಸಾಕಷ್ಟು ವೆರೈಟಿ ಇದ್ದು, ಕೆಲವರು ವಿಸ್ಕಿ ಇಷ್ಟಪಡ್ತಾರೆ. ಆದ್ರೆ ಇನ್ನೂ ಕೆಲವರು ರಮ್ ಮೊರೆ ಹೋಗ್ತಾರೆ. ಮತ್ತೆ ಕೆಲವರಿಗೆ ಬ್ರಾಂಡಿ ಅಂದರೆ ತುಂಬಾನೇ ಇಷ್ಟ. ಆದರೆ ಬಹುತೇಕರು ಬಿಯರ್ ಪ್ರಿಯರು. ಹೀಗೆ ಎಲ್ಲಾ ಬ್ರ್ಯಾಂಡ್ ಟೇಸ್ಟ್ ಮಾಡುವವರು ಕೂಡ ಇರ್ತಾರೆ. ಇವರೆಲ್ಲರ ಜೇಬಿಗೂ ಇನ್ನುಮುಂದೆ ಹೊರೆಯಾಗೋದು ಗ್ಯಾರಂಟಿ. ಯಾಕಂದ್ರೆ ಈಗ ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಘೋಷಿತ 18 ಸ್ಲ್ಯಾಬ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಹಾಗಾದರೆ ಬೆಲೆಯಲ್ಲಿ ಎಷ್ಟೆಲ್ಲಾ ಏರಿಕೆ ಆಗಲಿದೆ? ಮುಂದೆ ಓದಿ.
ಅಂದಹಾಗೆ ಸುಂಕ ಏರಿಕೆ ಪರಿಣಾಮ ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಳ ಮಾಡಲಾಗಿದೆ. ಹೀಗೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 175 ರಿಂದ ಶೇಕಡ 185ರಷ್ಟು ಹೆಚ್ಚಳವಾಗಲಿದೆ. ಭಾರತೀಯ ಮದ್ಯ 60 ಎಂಎಲ್ ಪೆಗ್‌ಗೆ 10 ರಿಂದ 20 ರೂಪಾಯಿ ಹೆಚ್ಚಳವಾಗಲಿದೆ. ಹಾಗೇ ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ಶೇಕಡಾ 10ರಷ್ಟು ಹೆಚ್ಚಳ ಕಂಡುಬರಲಿದೆ. ಬಡ್‌ವೈಸರ್ ಬಿಯರ್ 240 ರೂಪಾಯಿಗೆ ಏರಿಕೆ ಕಾಣುವ ನಿರೀಕ್ಷೆ ಇದ್ದರೆ, ಕಿಂಗ್ ಫಿಷರ್ ಪ್ರಿಮಿಯನ್ 190ಕ್ಕೆ ಏರಬಹುದು ಹಾಗೇ ಬ್ಲಾಕ್ & ವೈಟ್ 2,800 ರೂಪಾಯಿಗೆ ಏರಿಕೆಯಾಗಲಿದೆ. ಓಲ್ಡ್ ಮಂಕ್ ಕೂಡ ಬೆಲೆ ಏರಿಕೆಯ ಬಿಸಿಗೆ ತುತ್ತಾಗಲಿದೆ.
ಒಟ್ನಲ್ಲಿ ರಾಜ್ಯ ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದಲೇ ಈ ದರ ಹೆಚ್ಚಳ ಜಾರಿಗೆ ಬಂದಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬ್ರಾಂದಿ, ವಿಸ್ಕಿ, ಜಿನ್, ರಮ್ ಸೇರಿದಂತೆ ಇತರ ಮದ್ಯಗಳ ಸುಂಕವನ್ನ ಶೇಕಡಾ 20ರಷ್ಟು ಏರಿಕೆ ಮಾಡಲಾಗಿದೆ. ಜೊತೆಗೆ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 10ರಷ್ಟು ಹೆಚ್ಚಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆಯು ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಏರಿಕೆ ಕಂಡಿದೆ. ಈಗ ಬೆಲೆ ಏರಿಕೆ ಕಂಡು ಮದ್ಯ ಪ್ರಿಯರು ಮತ್ತೆ ಗೊಣಗುತ್ತಿದ್ದಾರೆ.