December 24, 2024

ಕುಕ್ಕೇಡಿ ಗ್ರಾಮ ಪಂಚಾಯತ್‌ನಲ್ಲಿ ಆಧಾರ್ ಸೀಡಿಂಗ್ ಕ್ಯಾಂಪ್ ಪ್ರಯೋಜನ ಪಡೆದುಕೊಂಡ ನೂರಾರು ಫಲಾನುಭವಿ ಗ್ರಾಮಸ್ಥರು

0

 

 

ಕುಕ್ಕೇಡಿ, ಜು. 20: ಕುಕ್ಕೇಡಿ ಗ್ರಾಮ ಪಂಚಾಯತ್ ವತಿಯಿಂದ ಕುಕ್ಕೇಡಿ-ನಿಟ್ಟಡೆ ಅಂಚೆ ಕಛೇರಿ ಸಹಬಾಗಿತ್ವದಲ್ಲಿ ಆಧಾರ್ ಸೀಡಿಂಗ್ ಶಿಬಿರವು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸರಕಾರದಿಂದ ಲಭಿಸುವ ವೃದ್ಯಾಪವೇತನ, ಸಂದ್ಯಾ ಸುರಕ್ಷಾ, ವಿಕಲ ಚೇತನ, ವಿಧವಾ, ಮನಸ್ವಿನಿ, ಮೈತ್ರಿ, ಕಿಶಾನ್ ಸಮ್ಮಾನ್, ಹಾಗೂ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಯ ಅನುಕೂಲತೆಗಾಗಿ ಈ ಶಿಬಿರ ಆಯೋಜಿಸಲಾಗಿತ್ತು.

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಪೂಜಾರಿ, ಅಭಿವೃದ್ಧಿ ಅಧಿಕಾರಿ ನವೀನ್ ಎ, ಸದಸ್ಯರುಗಳಾದ ಗೋಪಾಲ ಶೆಟ್ಟಿ, ದಿನೇಶ್ ಮೂಲ್ಯ, ಧನಂಜಯ ಕುಲಾಲ್, ನಿಟ್ಟಡೆ- ಕುಕ್ಕೇಡಿ-ವೇಣೂರು ಅಂಚೆ ಶಾಖಾ ಪಾಲಕರಾದ ವಿಶ್ವನಾಥ ಪೂಜಾರಿ, ವಿಜಯ ಜೈನ್ ಕುಕ್ಕೇಡಿ, ಉಮೇಶ್ ವೇಣೂರು, ಪದ್ಮನಾಭ, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗರಿಷ್ಠ ಸಂಖ್ಯೆಯಲ್ಲಿ ಪಂಚಾಯತ್ ವಾಪ್ತಿಯ ಗ್ರಾಮಸ್ಥರು ಪ್ರಯೋಜನ ಪಡಕೊಂಡರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು