ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ನಿರ್ಮಾಣವಾಯಿತು ತರಕಾರಿ ಕೈತೋಟ SKDRDP ನೇತೃತ್ವ, ಬೀಜಬಿತ್ತನೆ ಜತೆ ಹಣ್ಣಿನ ಗಿಡಗಳ ನಾಟಿ, ಸಹಕಾರ ನೀಡಿದ ಗುಂಡೂರಿ ಮಿಲ್ಕ್ ಸೊಸೈಟಿ
ಆರಂಬೋಡಿ, ಜು. 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಜ್ಞಾನ ವಿಕಾಸ-ಸ್ವ ಸಹಾಯ ಸಂಘಗಳ ಗುಂಡೂರಿ ಒಕ್ಕೂಟದ ಸದಸ್ಯರಿಂದ ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನದ ಮೂಲಕ ತರಕಾರಿ ಕೈತೋಟ ರಚಿಸಲಾಗಿದೆ.
ಮಕ್ಕಳ ಬಿಸಿಯೂಟಕ್ಕೆ ಸಹಕಾರಿ ಆಗುವ ನಿಟ್ಟಿನಲ್ಲಿ ವಿವಿಧ ತರಕಾರಿ ಬೀಜಗಳನ್ನು ಬಿತ್ತನೆ ಮಾಡಲಾಯಿತು. ಮತ್ತು ವಿವಿಧ ಬಗೆಯ ಹಣ್ಣು, ತರಕಾರಿ ಸಸಿಗಳನ್ನು ನೆಡಲಾಯಿತು. ಒಕ್ಕೂಟದ ಅಧ್ಯಕ್ಷರಾದ ಸದಾನಂದ ಪೂಜಾರಿ ಕುಂಞ್ಞೋಡಿ, ಮೇಲ್ವೀಚಾರಕಿ ಶ್ರೀಮತಿ ವೀಣಾ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಾಕ್ಷಾಯಿಣಿ, ಸಹಶಿಕ್ಷಕಿ ಶ್ರೀಮತಿ ಶೈಲಜಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿಗಳು, ಹಾಜರಿದ್ದು ಸಹಕಾರ ನೀಡಿದರು. ಉಪಹಾರವನ್ನು ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನೀಡಿದರು.