ನದಿಗೆ ಕಸ ಎಸೆಯುವವರಿಗೆ ಬಲೆ! ಉದ್ಯಮಿಯ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
ಕಾಶಿಪಟ್ಣ, ಜು. 16: ರಸ್ತೆ ಬದಿಗಳಲ್ಲಿ, ನದಿಗಳಿಗೆ ಕಸ ಎಸಯುವವರ ವಿರುದ್ಧ ಬ್ಯಾನರ್ ಹಾಕಿ, ಸಿಸಿ ಕೆಮರಾ ಅಳವಡಿಸಿ ಎಚ್ಚರಿಕೆ ನೀಡಿರುವುದನ್ನು, ಕ್ರಮ ಕೈಗೊಂಡಿರುವುದನ್ನು ಕಂಡಿದ್ದೇವೆ. ಕಸ ಎಸೆಯಬೇಡಿ ಬ್ಯಾನರ್ ಅಳವಡಿಸಿದಲ್ಲೇ ಹಲವೆಡೆ ಕಸದ ರಾಶಿ ಮತ್ತೆ ಕಂಡು ಬರುವುದಿದೆ. ಆದರೆ ಇಲ್ಲೊಬ್ಬರು ನದಿಗೆ ಕಸ ಎಸೆಯುವವರಿಗೆ ಕಡಿವಾಣ ಬಲೆ ಹಾಕುವ ಮೂಲಕ ಕಡಿವಾಣ ಹಾಕಿದ್ದಾರೆ.
ಹೌದು, ಕಾಶಿಪಟ್ಣ – ಶಿರ್ತಾಡಿ ರಸ್ತೆಯಲ್ಲಿ ಸಿಗುವ ಪಲ್ಗುಣಿ ನದಿಯ ಸೇತುವೆ ಬದಿಗೆ ಕ್ಯಾಪ್ಸಿ ಕ್ಯಾಟರಿಂಗ್‌ನ ಮಾಲಕರಾದ ಅನಿಲ್ ಅಂಚನ್‌ರವರು ಕಬ್ಬಿಣದ ಪೈಪ್‌ಗಳನ್ನು ಅಳವಡಿಸಿ ಬಲೆ ಹಾಕಿಸಿದ್ದು, ಸೇತುವೆ ಮೇಲಿಂದ ನದಿಗೆ ಕಸ ಎಸೆಯುವವರಿಗೆ ಇಲ್ಲಿ ಜಾಗವಿಲ್ಲವಾಗಿದೆ. ಉದ್ಯಮಿಯ ಈ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕೆಲವು ಸಾರ್ವಜನಿಕರು ಕೊಳೆತ ಕಸವನ್ನು ವಾಹನವನ್ನು ನಿಲ್ಲಿಸಿ ಎಸೆದು ನೀರನ್ನು ಮಲೀನಗೊಳಿಸುತ್ತಿದ್ದರು.