ಬೆಂಗಳೂರು, ಜುಲೈ 16: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳ ಮಾಹಿತಿಗೆ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್‌ಸೈಟ್ bmrc.co.in ಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಕೆಗು ಮುನ್ನ ಮಾಹಿತಿ, ವಿದ್ಯಾರ್ಹತೆ, ವೇತನ ಮಾಹಿತಿ ವಿವರ ಇಲ್ಲಿದೆ.
ಹುದ್ದೆಯ ಪೂರ್ಣ ಮಾಹಿತಿ 1 ಹುದ್ದೆ
ಹೆಸರು- ನಿರ್ದೇಶಕ (ಆಪರೇಷನ್ಸ್ & ಮೆಂಟೇನನ್ಸ್)
ವಿದ್ಯಾರ್ಹತೆ – ಎಂಜಿನಿಯರಿಂಗ್
ಮಾಸಿಕ ವೇತನ – ₹3,00,000
ಉದ್ಯೋಗದ ಸ್ಥಳ – ಬೆಂಗಳೂರು
ಶೈಕ್ಷಣಿಕ ಅರ್ಹತೆ ಮಾಹಿತಿ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಯಾವುದೇ ಲಿಕಲ್/ಇಂಡಿಯಾನ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ ಮತ್ತು ವೇತನ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 2023 ಜುಲೈ 14ಕ್ಕೆ ಕನಿಷ್ಠ 50 ವರ್ಷ ಮತ್ತು ಗರಿಷ್ಠ 57 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಮಾನ್ಯತೆ ನೇಮಕಾತಿ ಪ್ರಕಟಣೆ ತಿಳಿಸಿದೆ. ಇನ್ನೂ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡುವ ಜೊತೆಗೆ ಮಾಸಿಕ 3,00,000 ಸಂಬಳ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲು ಬಿಎಂಆರ್‌ಸಿಎಲ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು. ಅಲ್ಲಿ ಆಯ್ಕೆಯಾದವರಿಗೆ ಸಂದರ್ಶನ ನಡೆಸಲಾಗುವುದು ಎಂದು ನಮ್ಮ ಮಟ್ರೋ ತಿಳಿಸಿದೆ. ಅಭ್ಯರ್ಥಿಗಳಿಗೆ ಅರ್ಜಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕವು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಆಫ್‌ಲೈನ್ ಮೂಲಕ ಅರ್ಜಿಯನ್ನು ಜನರಲ್ ಮ್ಯಾನೇಜರ್ (HR) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್ ಕೆ.ಎಚ್. ರಸ್ತೆ, ಶಾಂತಿನಗರ ಬೆಂಗಳೂರು – 560027 ಇಲ್ಲಿಗೆ ಕಳುಹಿಸಬೇಕು. ಇನ್ನೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವೇಳೆ ಸಮಸ್ಯೆಗಳು ಉಂಟಾದಲ್ಲಿ ಇ-ಮೇಲ್ helpdesk@bmrc.co.in ಸಲ್ಲಿಕೆ ಮಾಡಿ ಪರಿಹರಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.