ದೇಲಂಪುರಿ ದೇಗುಲದ ವಠಾರದಲ್ಲಿ ಸಸಿನಾಟಿ SKDRDP ಹಾಗೂ ದೇಗುಲದ ಸಮಿತಿಗಳಿಂದ ಆಯೋಜನೆ
ವೇಣೂರು, ಜು. 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ವೇಣೂರು ವಲಯ, ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರದ ವತಿಯಿಂದ ದೇವಸ್ಥಾನದ ವಠಾರದಲ್ಲಿ ಸಸಿ ನಾಟಿ ಕಾರ್ಯಕ್ರಮ ಇಂದು ಜರಗಿತು.
ಈ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರು, ದೇಲಂಪುರಿ ಗೆಳೆಯರ ಬಳಗದ ಸದಸ್ಯರು ಸಹಕರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಹಾಗೂ ವಿವಿಧ ಪದಾಧಿಕಾರಿಗಳು, ಸದಸ್ಯರು ಇದ್ದರು. ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ, ಸೇವಾ ಪ್ರತಿನಿಧಿ ಶ್ರೀಮತಿ ಶೋಭಾ ಉಸ್ತುವಾರಿ ವಹಿಸಿದ್ದರು.
ಪ್ರಾಯಶ್ಚಿತವಾಗಿ ಗಿಡನಾಟಿ
ಕಳೆದ ಜನವರಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆದಿತ್ತು. ಜೀರ್ಣೋದ್ಧಾರದ ಸಂದರ್ಭ ದೇವಳಕ್ಕೆ ಬೇಕಾಗುವ ಪಕ್ಕಾಸು, ಹಲಗೆ, ರೀಪುಗಳಿಗಾಗಿ ಕೆಲವು ಮರಗಳನ್ನು ಕಡಿಯಲಾಗಿದ್ದು, ಅದರ ಪ್ರಾಯಶ್ಚಿತವಾಗಿ ಈ ಸಸಿ ನಾಟಿ ಕಾರ್ಯಕ್ರಮ ಆಯೋಜಿಸಯಿತು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.