December 24, 2024

ವೇಣೂರು: ದಿ ಹೇರ್‌ಲೇರ್ ಮೆನ್ಸ್ ಸೆಲೂನ್ ಉದ್ಘಾಟನೆ ನೂತನ ಸೆಲೂನನ್ನು ಉದ್ಘಾಟಿಸಿ ಶುಭ ಹಾರೈಸಿದ ಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್

0

 

 

 

 

 

ವೇಣೂರು, ಜು. 13: ಇಲ್ಲಿಯ ನೂತನ ಬಸ್ ತಂಗುದಾಣದ ನೆಲಮಹಡಿಯಲ್ಲಿ ನೂತನವಾಗಿ ಅರಂಭಗೊಂಡ ದಿ ಹೇರ್‌ಲೇರ್ ಮೆನ್ಸ್ ಸೆಲೂನ್‌ನ ಉದ್ಘಾಟನೆಯು ಜು. 6ರಂದು ಜರಗಿತು.

 

ವೇಣೂರಿನ ಪ್ರಖ್ಯಾತ ವೈದ್ಯರಾದ ಡಾ| ಶಾಂತಿಪ್ರಸಾದ್ ಅವರು ನೂತನ ಸೆಲೂನನ್ನು ಉದ್ಘಾಟಿಸಿ, ಶುಭ ಹಾರೈಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ವೆಂಕಟೇಶ್ ಭಂಡಾರಿ ಚಿಕ್ಕಮಗಳೂರು, ದಿವಾಕರ ಭಂಡಾರಿ ನಾರಾವಿ, ಪೂವಪ್ಪ ಭಂಡಾರಿ ಬೆಳ್ತಂಗಡಿ, ಉಮೇಶ್ ಭಂಡಾರಿ ಪಡ್ಡಂದಡ್ಕ, ಅಣ್ಣಿ ಭಂಡಾರಿ ಬೆಳ್ತಂಗಡಿ, ಗುಂಡ್ಯಲ್ಕೆ ಅಶೋಕ್ ಭಂಡಾರಿ, ಗಣೇಶ್ ನರ್ಮದಾ ಸ್ಟುಡಿಯೋ, ನಾಗಪ್ಪ, ಲಿಂಗಪ್ಪ ಮೂಲ್ಯ, ರವೀಂದ್ರ ಭಂಡಾರಿ ಮಂಗಳೂರು ವೇಣೂರಿನ ಉದ್ಯಮಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಲ್ಲಿ ಓರ್ವರಾದ ಪ್ರಜ್ವಲ್ ಭಂಡಾರಿ ಮಾತನಾಡಿ, ಮಂಗಳೂರಿನ ಮುಡಿಪು ಮತ್ತು ಕಾಯರ್‌ಗೋಳಿಯಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದೆ. ವೇಣೂರಿನ ನೂತನ ಸೆಲೂನಲ್ಲೂ ಗ್ರಾಹಕರಿಗೆ ಆಶಾದಾಯಕ ಸೇವೆ ನೀಡಲು ಸನ್ನದ್ಧರಾಗಿದ್ದು, ತ್ವರಿತ ಸೇವೆಗಾಗಿ ಮೂವರು ಸಿಬ್ಬಂದಿ ಕಾರ್ಯಾಚರಿಸುತ್ತಿದ್ದಾರೆ ಎಂದರು. ಸಂಸ್ಥೆಯ ಸಹವರ್ತಿಗಳಾದ ವೇಣೂರು ಮೋಹನ್ ಭಂಡಾರಿ, ಪ್ರಮೋದ್ ಭಂಡಾರಿ ಅತಿಥಿಗಳನ್ನ ಸತ್ಕರಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು