C.A.ಯ ಇಂಟರ್ ಮೀಡಿಯೆಟ್ ತರಬೇತಿ: ದೇಶಕ್ಕೆ 10ನೇ ರ್‍ಯಾಂಕ್ ಗಳಿಸಿದ ಬಜಿರೆಯ ದೀಪಕ್ ಹೆಗ್ಡೆ
ವೇಣೂರು, ಜು. 6: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ)ಯ ಸಿಎಯ (ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ) ಇಂಟರ್ ಮೀಡಿಯೆಟ್ ತರಬೇತಿಯಲ್ಲಿ ಬಜಿರೆ ಗ್ರಾಮದ ದೀಪಕ್ ಹೆಗ್ಡೆ ಅವರು ದೇಶದಲ್ಲಿ 10ನೇ ರ್‍ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ.
ಮೂಡಬಿದಿರೆ ಆಳ್ವಾಸ್‌ನಲ್ಲಿ ಸಿಎಯ ಮೊದಲ ಹಂತದ ಸಿಪಿಟಿ ತರಬೇತಿಯನ್ನು ಮತ್ತು ಇದೀಗ ಎರಡನೇ ಇಂಟರ್ ಮೀಡಿಯೆಟ್ ತರಬೇತಿಯನ್ನು ಪಡೆದುಕೊಂಡಿದ್ದರು. ಸಿಎಯ ಅಂತಿಮ ತರಬೇತಿ ಮುಂದುವರಿಸಿರುವ ದೀಪಕ್ ಹೆಗ್ಡೆ ಬಜಿರೆ ಗ್ರಾಮದ ಮುದ್ದಾಡಿ ದೀವಾಕರ ಹೆಗ್ಡೆ ಮತ್ತು ಶ್ರೀಮತಿ ನಳಿನಿ ಹೆಗ್ಡೆ ದಂಪತಿಯ ಪುತ್ರ.