ಸಾಮಾನ್ಯ ವರ್ಗದ ಕುಟುಂಬಕ್ಕೆ ಶೌಚಾಲಯಕ್ಕೆ ಅನುದಾನ ನೀಡಲು ಅವಕಾಶ ಇಲ್ಲ: ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ಕುಂಜಾಡಿ ದಾನಿ ಕಿರಣ್ ಮಂಜಿಲರವರ ಕಾರ್ಯಕ್ಕೆ ಅಧ್ಯಕ್ಷರಿಂದ ಶ್ಲಾಘನೆ
ಆರಂಬೋಡಿ, ಜು. 4: ಆರಂಬೋಡಿ ಗ್ರಾಮ ಪಂಚಾಯತು ಮಾಡುವ ಕೆಲಸವನ್ನು ದಾನಿ ಮಾಡಿದ್ದಾರೆ ಅನ್ನುವ ವಿವಾದಾತ್ಮಕ ವಿಚಾರಕ್ಕೆ ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಜಯ ಕುಂಜಾಡಿ ಸ್ಪಷ್ಟನೆ ನೀಡಿದ್ದು, ಸಾಮಾನ್ಯ ವರ್ಗದ ಕುಟುಂಬಕ್ಕೆ ಪಂಚಾಯತ್‌ನಿಂದ ಯಾವುದೇ ಸವಲತ್ತು ಒದಗಿಸಲು ಅವಕಾಶ ಇರುವುದಿಲ್ಲ ಎಂದಿದ್ದಾರೆ.
ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಸುಜಾತ ಕೋಂ ಮಹಾಬಲ ಪೂಜಾರಿ ಅವರಿಗೆ ಕಿರಣ್ ಮಂಜಿಲ ಅವರು ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಸುಜಾತರವರ ಕುಟುಂಬಕ್ಕೆ ಪಂಚಾಯತ್ ಸಹಕಾರ ನೀಡುತ್ತಾ ಬಂದಿದೆ. 2016-17ರಲ್ಲಿ ವಸತಿ ಯೋಜನೆಯಲ್ಲಿ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿರುತ್ತದೆ. ಪಂಚಾಯತ್ ಯಾರಿಗೂ ಅನ್ಯಾಯ, ನಿರ್ಲಕ್ಷ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.