BSW ಪದವಿ ಶಿಕ್ಷಣ: ಅತ್ಯಧಿಕ ಅಂಕ ಗಳಿಸಿದ ವೇಣೂರಿನ ಕು| ತೇಜಸ್ವಿನಿ ಕುಲಾಲ್‌ಗೆ ಆಳ್ವಾಸ್‌ನಿಂದ ಗೌರವಾರ್ಪಣೆ
ವೇಣೂರು/ಮೂಡಬಿದಿರೆ, ಜು. 2: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ BSW (ಬ್ಯಾಚುರಲ್ ಆಫ್ ಸೋಶಿಯಲ್ ವರ್ಕ್) ಪದವಿ ಶಿಕ್ಷಣದ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ವೇಣೂರಿನ ಕು| ತೇಜಸ್ವಿನಿ ಕುಲಾಲ್ ಅವರಿಗೆ ಕಾಲೇಜು ವತಿಯಿಂದ ಕಾಲೇಜಿನ ಪ್ರಾಚಾರ್ಯರಾದ ಡಾ| ಕುರಿಯನ್ ಅವರು ಅಭಿನಂದಿಸಿ, ಗೌರವಾರ್ಪಣೆ ಸಲ್ಲಿಸಿದರು.
ವೇಣೂರಿನ ನಿವಾಸಿ ವಿನೋದ ಗಣೇಶ್ ಅವರ ಪುತ್ರಿಯಾಗಿರುವ ಕು| ತೇಜಸ್ವಿನಿ ಕುಲಾಲ್ ಇದೀಗ ಅದೇ ಆಳ್ವಾಸ್ ಕಾಲೇಜಿನಲ್ಲಿ MSW ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದು, ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ.