ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜನಮೆಚ್ಚಿದ ನಾಯಕ ಹರೀಶ್ ಪೂಂಜರಿಗೆ ಸನ್ಮಾನ
ಬಳಂಜ, ಜೂ. 29: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಬಳಂಜ ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಹಪರಿವಾರ ದೈವಗಳ ಸೇವಾ ಟ್ರಸ್ಟ್ ಬೊಂಟ್ರೊಟ್ಟು ವತಿಯಿಂದ ಶಾಸಕರ ನಿವಾಸಿದಲ್ಲಿ ಜೂ.೨೯ ರಂದು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಬೊಂಟ್ರೊಟ್ಟು, ಉಪಾಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಟ್ರಸ್ಟ್‌ನ ಪ್ರದಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ಬಳಂಜ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಉಪಾಧ್ಯಕ್ಷ ಬಾಲಕೃಷ್ಣ ಯೈಕುರಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಣೇಶ್ ಪೂಜಾರಿ ಬೊಂಟ್ರೊಟ್ಟು, ಹರೀಶ್ ರೈ ಬರಮೇಲು, ಸದಸ್ಯರಾದ ಸದಾನಂದ ಪೂಜಾರಿ ಬೊಂಟ್ರೊಟ್ಟು, ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು, ದಿನೇಶ್ ಕೋಟ್ಯಾನ್ ನಾಲ್ಕೂರು, ಗಣೇಶ್ ಸಂಭ್ರಮ, ಅನಿಲ್ ಬೊಂಟ್ರೊಟ್ಟು ಹಾಗೂ ಇತರರು ಉಪಸ್ಥಿತರಿದ್ದರು.