ವೇಣೂರು: ಪ್ಲಂಬರ್‍ಸ್ ಗಳ ಸಮ್ಮಿಲನ ಕಾರ್ಯಕ್ರಮ
ವೇಣೂರು, ಮೇ 3: ಅಸ್ಟ್ರಲ್ ಪೈಪ್ಸ್ ಮತ್ತು ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿ ವೇಣೂರು ಇದರ ಸಹಭಾಗಿತ್ವದಲ್ಲಿ ಪ್ಲಂಬರ್‍ಸ್‌ಗಳ ಸಮ್ಮಿಲನ ಕಾರ್ಯಕ್ರಮವು ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಸ್ಟ್ರಲ್ ಪೈಪ್ಸ್ ಸಂಸ್ಥೆಯ ವಿನಾಯಕ್ ಅವರು ಮಾರುಕಟ್ಟೆಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಿದರು.
ಬಳಿಕ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು. ವೇಣೂರು ಧನಲಕ್ಷ್ಮೀ ಸಂಸ್ಥೆಯ ಮಾಲಕ ಬಿ. ಮಂಜುನಾಥ್ ನಾಯಕ್, ನಾಯಕ್ ಸಮೂಹ ಸಂಸ್ಥೆಗಳ ಬಿ. ಜಗದೀಶ್ ನಾಯಕ್, ಬಿ. ಮೋಹನದಾಸ್ ನಾಯಕ್ ಉಪಸ್ಥಿತರಿದ್ದರು.
ಸುಮಾರು 80 ಮಂದಿ ಪ್ಲಂಬರ್‍ಸ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆದಿತ್ಯ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.