ಉಂಬೆಟ್ಟು ಶಾಲೆಯ ಸುಪಿಯಾ ಎಸ್. ರಾಜ್ಯಮಟ್ಟದ NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆ
ವೇಣೂರು, ಮೇ 2: ಉಂಬೆಟ್ಟು ಸ.ಉ.ಪ್ರಾ. ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಸುಪಿಯಾ ಎಸ್. 2022-23ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಜ್ಯ ಮಟ್ಟದ NMMS ಪರೀಕ್ಷೆಗೆ ಹಾಜರಾಗಿ NMMSನ ವಿದ್ಯಾರ್ಥಿ
ವೇತನಕ್ಕೆ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನಿಂದ ಪರೀಕ್ಷೆ ಬರೆದ 1091ಮಂದಿ 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಸುಪಿಯಾ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಹುಲ್ಲೋಡಿ ನಿವಾಸಿ ಸದಾನಂದ ಪೂಜಾರಿ ಹಾಗೂ ಶ್ರೀಮತಿ ವನಿತಾ ಅವರ ಸುಪುತ್ರಿ. ಇವರಿಗೆ ತಿಂಗಳಿಗೆ 1000 ರೂ.ದಂತೆ ವರ್ಷಕ್ಕೆ 12,000 ರೂ. ಮುಂದಿನ ನಾಲ್ಕು ವರ್ಷಗಳ ವರೆಗೆ ಒಟ್ಟು 48000 ರೂ. ವಿದ್ಯಾರ್ಥಿ ವೇತನ ದೊರೆಯಲಿದೆ. ಇವರಿಗೆ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರು ತರಬೇತಿ ನೀಡಿರುತ್ತಾರೆ. ಜೊತೆಗೆ ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆಯಲ್ಲಿಯೂ ಸುಪಿಯಾ ತರಬೇತಿ ಪಡೆದಿದ್ದರು.