December 23, 2024

ತಾಲೂಕಿನ 241 ಬೂತ್‌ಗಳಲ್ಲಿ ಬಿಜೆಪಿ ಇಂದು ಮಹಾ ಮತಪ್ರಚಾರ! ವೇಣೂರು ಹೋಬಳಿಯಲ್ಲೂ ಸಾಥ್ ನೀಡಿದ ಕಾರ್ಯಕರ್ತರು

0

ಬೆಳ್ತಂಗಡಿ, ಎ. 30: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಪರವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಭಾನುವಾರ ತಾಲೂಕಿನ ಎಲ್ಲಾ 241 ಬೂತ್‌ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮನೆ ಮನೆ ಪ್ರಚಾರ ಅಭಿಯಾನ ನಡೆಸಿದರು.
ರಾಜ್ಯ ಬಿಜೆಪಿ ಸೂಚನೆಯಂತೆ ಭಾನುವಾರ ಎಲ್ಲ ಮುಖಂಡರು ಅವರ ಬೂತ್ ಗಳಲ್ಲೇ ಪ್ರಚಾರ ನಡೆಸಬೇಕು ಎಂಬ ಸೂಚನೆಯಂತೆ ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಗರ್ಡಾಡಿ ಗ್ರಾಮದ ಬೂತ್ ಸಂಖ್ಯೆ ೧೨೪ ರಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮರೋಡಿ ಗ್ರಾಮದಲ್ಲಿ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಗ್ರಾಮದ ಬೂತ್, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ ರಾವ್ ಧರ್ಮಸ್ಥಳ ಗ್ರಾಮದ ಬೂತ್, ಗಣೇಶ್ ಗೌಡ ನಾವೂರು ಗ್ರಾಮದ ಬೂತ್ ನಲ್ಲಿ ಮನೆ ಮನೆ ಪ್ರಚಾರ ನಡೆಸಿದರು.
ವೇಣೂರು ಹೋಬಳಿಯಲ್ಲೂ ಸಾಥ್ ನೀಡಿದ ಕಾರ್ಯಕರ್ತರು
ಇಲ್ಲಿಯ ಬೂತ್ 130ರಲ್ಲಿ ಚುನಾವಣಾ ಮಹಾ ಪ್ರಚಾರ ಅಭಿಯಾನ ನಡೆಯಿತು ಪ್ರಮುಖರಾದ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ಬೂತ್ ಅಧ್ಯಕ್ಷ ನಾರಾಯಣ ಕುಲಾಲ್ ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಸುಚಿತ್ರ, ಶುಭ, ಜಯಂತಿ, ಬೂತ್ ಸಮಿತಿಯ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಆರಂಬೋಡಿ: ಹರೀಶ್ ಪೂಂಜರ ಪರವಾಗಿ ಮತಯಾಚನೆ ಅಭಿಯಾನ

ಆರಂಬೋಡಿ ಗ್ರಾಮದ ಬೂತ್ ಸಂಖ್ಯೆ ೧೩೬, ಹಾಗೂ ೧೩೭ರ ಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಮತಯಾಚನೆ ಅಭಿಯಾನ ಹಾಗೂ ಪ್ರಣಾಳಿಕೆ ಇಂದು ಜರಗಿತು.


ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಆಶಾ ಶೆಟ್ಟಿ, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಂಜಾಡಿ, ಸದಸ್ಯರಾದ ಪ್ರಭಾಕರ್. ಎಚ್, ಸತೀಶ್ ಮಠ, ಸುರೇಂದ್ರ ಶೆಟ್ಟಿ,೧೩೬ ರ ಬೂತ್ ಸಮಿತಿ ಅಧ್ಯಕ್ಷರು ಅಮಿತ್,೧೩೭ರ ಬೂತ್ ಸಮಿತಿ ಅಧ್ಯಕ್ಷರು ಕೃಷ್ಣ ಶೆಟ್ಟಿ, ಬೂತ್ ಸಮಿತಿಯ ಕಾರ್ಯದರ್ಶಿಗಳು, ಬಿಜೆಪಿ ಎಸ್. ಸಿ, ಮೋರ್ಚಾ ಬೆಳ್ತಂಗಡಿ ಮಂಡಲದ ಕಾರ್ಯದರ್ಶಿ ಸುರೇಶ್. ಎಚ್., ಸಿ. ಎ, ಬ್ಯಾಂಕ್ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ವಿವಿಧ ಜವಾಬ್ದಾರಿಯ ಪಕ್ಷದ ಪ್ರಮುಖರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು