ಬಜಿರೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಯುವಪಡೆ ಫೀಲ್ಡ್‌ಗೆ
ವೇಣೂರು, ಎ. 30: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಪರ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದಲ್ಲಿ ಕೈ ಕಾರ್ಯಕರ್ತರು ಪ್ರಚಾರದ ಫೀಲ್ಡ್‌ಗೆ ಇಳಿದಿದ್ದಾರೆ.
ಮುದ್ದಾಡಿ ದೈವಸ್ಥಾನದ ಬಳಿ ಒಟ್ಟು ಸೇರಿರುವ ಕೈ ಕಾಯಕರ್ತರ ಪಡೆ ಬಜಿರೆ ಗ್ರಾಮದ ವಿವಿಧ ಬ್ಲಾಕ್‌ಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅಭ್ಯರ್ಥಿ ಸೇವಾ ಕಾರ್ಯ ಮತ್ತು ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳ ಬಗ್ಗೆ ಮನೆಮನೆಗೆ ತೆರಳಿ ತಿಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿದೆ.