ಕನ್ನಡದ ಮಗಳು ಚಿತ್ರ ಮಲಯಾಳಂ ಭಾಷೆಗೆ ರಿಮೇಕ್?
ಮಂಗಳೂರು, ಎ, 29: ಇತ್ತೀಚೆಗೆ ಚಿತ್ರಮಂದಿರಗಳಿಗೆ ಬಿಡುಗಡೆಗೊಂಡು ಚಿತ್ರಸಂದೇಶದ ಮೂಲಕ ಜನಮನ್ನಣೆ ಗಳಿಸಿದ್ದ ತೋಮಸ್ ಎಂ.ಎಂ. ನಿರ್ದೇಶನದ ಮಗಳು ಕನ್ನಡ ಚಲನಚಿತ್ರ ಇದೀಗ ಮಲಿಯಾಳಂ ಭಾಷೆಗೆ ರಿಮೇಕ್ ಆಗುವ ಬಗ್ಗೆ ಕೇರಳದ ನಿರ್ಮಾಪಕರು ಮಗಳು ಚಿತ್ರದ ನಿರ್ಮಾಪಕ ತೋಮಸ್ ಎಂ.ಎಂ. ಅವರನ್ನು ಸಂಪರ್ಕಿಸಿದ್ದಾರೆ.
ಈ ಬಗ್ಗೆ ಮಲಿಯಾಳಂನ ಪ್ರಖ್ಯಾತ ನಿರ್ಮಾಪಕರಾಗಿರುವ ರಾಜನ್ ತಳಿಪರಂಬ ಅವರು ಮಗಳು ಚಿತ್ರದ ನಿರ್ಮಾಪಕರ ಜತೆ ಮಾತುಕತೆ ನಡೆಸಿದ್ದು, ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಿದೆ ಎಂದು ಚಿತ್ರದ ನಿರ್ಮಾಣಪಕ ಹಾಗೂ ನಿರ್ದೇಶಕರಾಗಿರುವ ತೋಮಸ್ ಎಂ.ಎಂ. ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಮಗಳು ಕನ್ನಡ ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಬೆಗಳಿಗೆ ಮಲಯಾಳಂ ಚಿತ್ರದಲ್ಲೂ ಅವಕಾಶ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.