ಹೊಸ್ಮಾರು, ಎ. 26: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪರ ಹೊಸ್ಮಾರಿನ ಬಿಜೆಪಿ ಕಾರ್ಯಕರ್ತರು ಮನೆ, ಅಂಗಡಿ, ಮಳಿಗೆಗಳಿಗೆ ತೆರಳಿ ಭರ್ಜರಿ ಮತಭೇಟೆ ನಡೆಸಿದರು. ಅಮಿತ್ ಜೈನ್ ಮುಂದಾಳತ್ವದಲ್ಲಿ ಕಾರ್ಯಕರ್ತರು ಬಿರುಸಿನ ಮತಯಾಚನೆ ನಡೆಸಿದ್ದು, ಸಚಿವ ಸುನಿಲ್ ಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿದರು.