ಮುದ್ದಾಡಿ ಕ್ಷೇತ್ರ: ಧ್ವಜಾವರೋಹಣದೊಂದಿಗೆ ಇಂದು ಸಂಪನ್ನಗೊಂಡ ವಾರ್ಷಿಕ ಜಾತ್ರೆ
ವೇಣೂರು, ಎ. 25: ಬಜಿರೆ ಶ್ರೀ ಕ್ಷೇತ್ರ ಮುದ್ದಾಡಿ ಶ್ರೀ ಮಾರವಾಂಡಿ ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವವು ಎ. 25ರ ಬೆಳಿಗ್ಗೆ ಸಂಪನ್ನಗೊಂಡಿತು.
ಎ. 23ರಂದು ಬೆಳಿಗ್ಗೆ ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಶುದ್ಧ ಕಲಶ, ಪ್ರತಿಷ್ಠೆ, ಸಂಜೆ ಮಾರವಾಂಡಿ ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಲುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಿತು. ಎ. 24ರಂದು ಸಂಜೆ ಬಲಿ ಉತ್ಸವ, ಧಾರ್ಮಿಕಸಭೆ ಜರಗಿತು. ಬಳಿಕ ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಿತು. ಇಂದು ಬೆಳಗ್ಗಿನ ಜಾವ ಧ್ವಜಾವರೋಹಣದೊಂದಿಗೆ ಜಾತ್ರೆ ಸಂಪನ್ನಗೊಂಡಿತು. ವಿವಿಧ ಗ್ರಾಮದ ಸಾವಿರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಗಂಧಪ್ರಸಾದ ಸ್ವೀಕರಿಸಿದರು.