December 24, 2024

ವೇಣೂರು ಎಸ್‌ಡಿಎಂ ಐಟಿಐಯಲ್ಲಿ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ

0

ವೇಣೂರು, ಎ. 21: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ [ಐಟಿಐ]ಯಲ್ಲಿ ಹಲವರು ರಾಷ್ಟ್ರೀಯ/ಬಹುರಾಷ್ಟ್ರೀಯ ಉದ್ದಿಮೆಗಳಿಂದ ಕ್ಯಾಂಪಸ್ ಸಂದರ್ಶನಗಳು ನಡೆಯುತ್ತಿವೆ.
ಮ್ಯಾಕಿನೋ ಇಂಡಿಯಾ, ನಂದಿ ಟೋಯೋಟಾ, ಅದೈತ್ ಹುಂಡೈ ಗಳಿಂದ ಈಗಾಗಲೇ ಕ್ಯಾಂಪಸ್ ಸಂದರ್ಶನಗಳು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಟೋಯೊಟಾ, ಎಲ್ ಎಂಡ್ ಟಿ, ವೋಲ್ವೋ, ಡೈರಿ ಡೇ, ಭವಾನಿ ಇಂಡಸ್ಟ್ರೀಸ್, ಭಾರತ್ ಆಟೋ ಕಾರ್‍ಸ್, ಭಾಷ್, ಸ್ನೈಡರ್ ಎಲೆಕ್ಟ್ರಿಕ್, ಅಥೇರ್ ಎಲೆಕ್ಟ್ರಿಕ್ ವೆಹಿಕಲ್, ಶೀಥಲ್ ರೆಫ್ರಿಜರೇಶನ್, ಮುಂತಾದ ರಾಷ್ಟ್ರದ ಪ್ರಖ್ಯಾತ ಕಂಪಗಳು ಕ್ಯಾಂಪಸ್ ಸಂದರ್ಶನಗಳ ದಿನ ನಿಗದಿಯಾಗಿದ್ದು, ಈ ವರ್ಷವೂ ಎಲ್ಲಾ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ನಡೆಯಲಿದ್ದು ಮೇ ತಿಂಗಳಿನ ಅಂತ್ಯದೊಳಗೆ ಎಲ್ಲಾ ವಿದ್ಯಾರ್ಥಿಗಳು ಆಯ್ಕೆಯಾಗಿ ಈ ವರ್ಷದ ಅಖಿಲ ಭಾರತ ವೃತ್ತಿ ಪರೀಕ್ಷೆಯು ಮುಗಿದ ಕೂಡಲೇ ಎಲ್ಲಾ ವಿದ್ಯಾರ್ಥಿಗಳು ಆಯ್ಕೆ ಗೊಂಡ ಕಂಪಗಳಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಆಡಳಿತ ಮಂಡಳಿಯವರ ಪೂರ್ಣ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಈ ವರ್ಷವೂ ಶೇ. ೧೦೦ ನೇಮಕಾತಿ ಪ್ರಕ್ರಿಯೆಯನ್ನು ದಾಖಲಿಸಲಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು