ವೇಣೂರು ಜಾತ್ರೋತ್ಸವ: ಗಮಕ ವಾಚನ, ಮನೋರಂಜನೆ ಕಾರ್ಯಕ್ರಮ
ವೇಣೂರು, ಎ. 15: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. ೧14ರಿಂದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಭಾಕರ ಪ್ರಭು ಮತ್ತು ಪ್ರಜ್ಞಾ ಪ್ರಭು ಅವರಿಂದ ಗಮಕ ವಾಚನ ಕಾರ್ಯಕ್ರಮ ನಡೆಯಿತು. ಪ್ರಭಾಕರ ಪ್ರಭು ಅವರು ಗಮಕ ವಾಚನದ ವಿವರಣೆ ನೀಡಿದ್ದು, ಪ್ರಜ್ಞಾ ಪ್ರಭು ಅವರ ಗಾಯನದೊಂದಿಗೆ ನಡೆದ ಕಾರ್ಯಕ್ರಮ ನೋಡುಗರ ಮನಸೋರೆಗೊಳಿಸಿತು.
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆ ಮತ್ತು ಕಾಲೇಜಿನ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರಗಲಿದೆ. ಬಳಿಕ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಲಿದೆ.