ಗೋಳಿಯಂಗಡಿ-ಅಳದಂಗಡಿ ಸಂಪರ್ಕದ ಅರಣ್ಯ ಪ್ರದೇಶದ ರಸ್ತೆಯಲ್ಲಿ ರಾಶಿರಾಶಿ ತ್ಯಾಜ್ಯ!
ಕುಕ್ಕೇಡಿ, ಎ. 15: ಗೋಳಿಯಂಗಡಿಯಿಂದ ಅಳದಂಗಡಿ ರಸ್ತೆಯ ರಸ್ತೆಯಲ್ಲಿ ಅಲ್ಲಲ್ಲಿ ರಾಶಿರಾಶಿ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯಲಾಗಿದ್ದು, ಪರಿಸರಕ್ಕೆ ಮಾರಕವಾಗಿದೆ.
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪಂಚಾಯತ್‌ಗಳು ಆಗಾಗ ಜಾಗೃತಿ ಮೂಡಿಸುವ ಹೊರತಾಗಿಯೂ ನಾಂಜಕಾಡು ರಸ್ತೆಬದಿ ಪ್ಲಾಸ್ಟಿಕ್ ಹಾಗೂ ಇನ್ನಿತ್ತರ ತ್ಯಾಜ್ಯ ಪರಿಕರಗಳ ಕಸವನ್ನು ಸುರಿಯಲಾಗಿದ್ದು, ಈ ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಸಂಬಂಧಿತ ಇಲಾಖೆ ಹಾಗೂ ಪಂಚಾಯತು ಕ್ರಮ ಕೈಗೊಳ್ಳಬೇಕಿದೆ.