ಕುತ್ಲೂರು: ಕಲ್ಕುಡ ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನದ ತುಳು ಭಕ್ತಿಗೀತೆ ಬಿಡುಗಡೆ
ನಾರಾವಿ, ಎ. 15: ವಜ್ರನಾಭ ಜೈನ್ ನಾರಾವಿ ನಿರ್ಮಾಣದ ಸುರೇಂದ್ರ ಜೈನ್ ನಾರಾವಿ ನಿರ್ದೇಶನದಲ್ಲಿ ಕುತ್ಲೂರು ಗ್ರಾಮದ ಅರಸಕಟ್ಟೆಯಲ್ಲಿರುವ ಕಲ್ಕುಡ ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನದ ಕುರಿತಾಗಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ.ಎನ್. ಕ್ರಿಯೇಷನ್‌ರವರ ಕಲ್ಕುಡ ಮಹಿಮೆ ಎಂಬ ತುಳು ಭಕ್ತಿಗೀತೆ ಇತ್ತೀಚೆಗೆ ಬಿಡುಗಡೆಗೊಂಡಿತ್ತು.
ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ದೃಶ್ಯದ ಮೂಲಕ ವಿಭಿನ್ನ ಶೈಲಿಯ ಭಕ್ತಿಗೀತೆಯನ್ನು ವಜ್ರನಾಭ ಜೈನ್ ನಾರಾವಿ ಲೋಕಾರ್ಪಣೆಗೊಳಿಸಿದರು. ಈ ಭಕ್ತಿ ಗೀತೆಯ ಸಾಹಿತ್ಯ ಪಾರ್ಶ್ವನಾಥ ಜೈನ್ ಕಕ್ಯಪದವು, ಗಾಯನ ಮತ್ತು ವಿಡಿಯೋ ಚಿತ್ರೀಕರಣ ಗಣೇಶ್ ಹೆಗ್ಡೆ ಧನ್ವಿತಾ ಸ್ಟುಡಿಯೋ ನಾರಾವಿ, ಪರಿಕಲ್ಪನೆ ಹರಿಶ್ಚಂದ್ರ ಪೂಜಾರಿ ನಾರಾವಿ, ಸಂಕಲನ ರಕ್ಷಿತ್ ರೈ, ತಾಂತ್ರಿಕ ಸಲಹೆ ಯಶವಂತ್ ಬೆಳ್ತಂಗಡಿ ಸಹಕರಿಸಿದ್ದಾರೆ. ಕ್ಷೇತ್ರದ ಅರ್ಚಕರಾದ ರಮೇಶ್ ಭಟ್ ಕೊಕ್ರಾಡಿ ಶುಭ ಹಾರೈಸಿದರು. ತಂಡದ ಸದಸ್ಯರಾದ ಸೂರಜ್ ಜೈನ್, ಶೀನ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.