ನಿಟ್ಟಡೆ ಕುಂಭಶ್ರೀ ಶಾಲೆ ಸ್ಕೂಟರ್ ಸ್ಕಿಡ್: ಸವಾರರಿಗೆ ಗಾಯ
ವೇಣೂರು, ಎ. 15: ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ನಿಟ್ಟಡೆ ರಾಜ್ಯ ಹೆದ್ದಾರಿ ಕುಂಭಶ್ರೀ ಶಾಲೆ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರರು ಗಾಯಗೊಂಡ ಘಟನೆ ನಡೆದಿದೆ.
ಗಾಯಾಳನ್ನು ಕುಕ್ಕೇಡಿ ಗ್ರಾಮದ ಗ್ರೆಗೋರಿ ಫೆರ್ನಾಂಡಿಸ್ ಹಾಗೂ ಲ್ಯಾನ್ಸಿ ಫೆರ್ನಾಂಡಿಸ್ ಗಾಯಗೊಂಡವರು. ಎ. ೧೦ರಂದು ವೇಣೂರು ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದೆರಡು ತಿಂಗಳಿನಿಂದ ನಿಟ್ಟಡೆ ಬಳಿ ಹಲವು ಅಪಘಾತಗಳು ಸಂಭವಿದೆ. ಕಳೆದೊಂದು ವಾರದ ಹಿಂದೆಯಷ್ಟೇ ಆಮ್ನಿಯೊಂದು ಮರಕ್ಕೆ ಡಿಕ್ಕಿಯೊಡೆದು ಪಲ್ಟಿಯಾಗಿತ್ತು.