ಹೊಸಪಟ್ಣದಲ್ಲಿ ಬೈಕ್‌ಗೆ ಈಚರ್ ಲಾರಿ ಡಿಕ್ಕಿ: ಗಾಯ
ವೇಣೂರು, ಎ. 15: ಈಚರ್ ಲಾರಿಯೊಂದು ಬೈಕ್‌ಗೆ ಡಿಕ್ಕಿಯೊಡೆದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಜಿರೆ ಗ್ರಾಮದ ಹೊಸಪಟ್ಣದಲ್ಲಿ ಎ.14ರಂದು ಸಂಜೆ ನಡೆದಿದೆ.
ನೈನಾಡು ಕಡೆಯಿಂದ ಬರುತ್ತಿದ್ದ ಈಚರ್ ಲಾರಿ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿಯೊಡೆದಿದೆ. ಗಾಯಗೊಂಡಿರುವ ಬೈಕ್ ಸವಾರರಾದ ನೈನಾಡು ನಿವಾಸಿ ಸನತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹಾಗೂ ಮಾಲಾಡಿ ನಿವಾಸಿ ಪ್ರಭಾಕರ ಮೂಲ್ಯ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈಚರ್ ಚಾಲಕನ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.