ಎದುರಾಳಿ ಯಾರೇ ಇದ್ದರೂ ಚುನಾವಣೆ ಎದುರಿಸೋದು ಗೊತ್ತಿದೆ ಧರ್ಮಸ್ಥಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಧರ್ಮಸ್ಥಳ: ಎದುರಾಳಿ ಯಾರೇ ಇದ್ದರೂ ಸರಿ ಚುನಾವಣೆ ಎದುರಿಸೋದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎ. 12ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಅವರು ದೇವರ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಧರ್ಮಸ್ಥಳ, ಕುಕ್ಕೆ, ಸೋಮೇಶ್ವರ ದೇವಸ್ಥಾನಗಳಿಗೆ ಅವಾಗಾವಾಗ ಭೇಟಿ ನೀಡುತ್ತಿರುತ್ತೇನೆ. ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಬಂದು ಮಂಜುನಾಥನ ದರ್ಶನ ಪಡೆದಿದ್ದೇನೆ. ಸಮಸ್ತ ಕನ್ನಡ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಮಾಡಿದ್ದೇನೆ. ಪಕ್ಷದಲ್ಲಿ ಅಸಮಾಧಾನಗೊಂಡಿರುವ ಎಲ್ಲರತ್ರನೂ ಸಂಪರ್ಕದಲ್ಲಿದ್ದೇನೆ. ಪಕ್ಷ ಅವರನ್ನ ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನ ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ತೇನೆ ಎಂದರು.
ಪತ್ನಿ ಸಮೇತರಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಧರ್ಮಸ್ಥಳ ಬಳಿಯ ಹೆಲಿಪ್ಯಾಡ್‌ನಲ್ಲಿ ಇಳಿದು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅನ್ಯ ಪ್ರವಾಸದ ನಿಮಿತ್ತ ತೆರಳಿದ್ದ ಹಿನ್ನೆಲೆಯಲ್ಲಿ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿಯಾದರು. ಹರೀಶ್ ಪೂಂಜ, ಪ್ರತಾಪ್‌ಸಿಂಹ ನಾಯಕ್ ಹಾಗೂ ಮತ್ತಿತರ ಬಿಜೆಪಿ ಮುಖಂಡರುಗಳು ಜತೆಗಿದ್ದರು.